Home Mangalorean News Kannada News ಪೇಜಾವರ ಸ್ವಾಮೀಜಿ ಆರೋಗ್ಯ ಗಂಭೀರ- ಮೆದುಳು ನಿಷ್ಕ್ರೀಯತೆಗೆ – ಆಸ್ಪತ್ರೆ ವರದಿ

ಪೇಜಾವರ ಸ್ವಾಮೀಜಿ ಆರೋಗ್ಯ ಗಂಭೀರ- ಮೆದುಳು ನಿಷ್ಕ್ರೀಯತೆಗೆ – ಆಸ್ಪತ್ರೆ ವರದಿ

Spread the love

ಪೇಜಾವರ ಸ್ವಾಮೀಜಿ ಆರೋಗ್ಯ ಗಂಭೀರ- ಮೆದುಳು ನಿಷ್ಕ್ರೀಯತೆಗೆ – ಆಸ್ಪತ್ರೆ ವರದಿ
ಉಡುಪಿ: ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮೆದುಳಿನ ಸಂಪೂರ್ಣ ನಿಷ್ಕ್ರೀಯತೆಗೆ ಒಳಗಾಗುತ್ತಿದೆ ಎಂದು ಮಣಿಪಾಲ ಕೆ ಎಮ್ ಸಿ ವೈದ್ಯರು ತಿಳಿಸಿದ್ದಾರೆ.

ಪೇಜಾವರ ಸ್ವಾಮೀಜಿಯ ಆರೋಗ್ಯದ ಕುರಿತು ಕೆ ಎಮ್ ಸಿ ಮಣಿಪಾಲದ ಅಧೀಕ್ಷಕರಿಂದ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದ್ದು ಅದರ ಪ್ರಕಾರ ಪೇಜಾವರ ಸ್ವಾಮೀಜಿಯ ಆರೋಗ್ಯ ತೀರಾ ಗಂಭಿರವಾಗಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ಇಳಿಮುಖವಾಗಿದೆ. ಸ್ವಾಮೀಜಿಯವರ ಪ್ರಜ್ಞಾಹೀನ ಸ್ಥಿತಿ ಮುಂದುವರೆದಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ ಮತ್ತು ಮೆದುಳಿನ ಸಂಪೂರ್ಣ ನಿಷ್ಕ್ರಿಯತೆ ಗೆ ಒಳಗಾಗುತ್ತಿದೆ ಎಂದು ತಿಳಿಸಿದ್ದಾರೆ.


Spread the love

Exit mobile version