Home Mangalorean News Kannada News ಪೊಲೀಸರಿಗೆ ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚನೆಯ ಮೂಲ ಕೌಶಲ್ಯ ಅಭಿವೃದ್ಧಿಗಾಗಿ ಕಾರ್ಯಾಗಾರ

ಪೊಲೀಸರಿಗೆ ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚನೆಯ ಮೂಲ ಕೌಶಲ್ಯ ಅಭಿವೃದ್ಧಿಗಾಗಿ ಕಾರ್ಯಾಗಾರ

Spread the love

ಪೊಲೀಸರಿಗೆ ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚನೆಯ ಮೂಲ ಕೌಶಲ್ಯ ಅಭಿವೃದ್ಧಿಗಾಗಿ ಕಾರ್ಯಾಗಾರ

ಮಂಗಳೂರು:ಪೊಲೀಸ್ ಠಾಣೆಗೆ ತಮ್ಮ ಸಮಸ್ಯೆಗಳಿಗೆ ಸಹಾಯಕ್ಕಾಗಿ ಬರುವ ನೊಂದ ಮಹಿಳೆ ಮತ್ತು ಮಕ್ಕಳಿಗೆ ಯಾವರೀತಿ ಸ್ಪಂದನೆ ಮಾಡಬೇಕು, ಹೇಗೆ ಕೌನ್ಸಿಲಿಂಗ್ ನಡೆಸಬೇಕು ಎಂಬುದರ ಕುರಿತು ಮಹಿಳಾ ಪೊಲೀಸ್ ಠಾಣೆಯ ಎಲ್ಲಾ ಮಹಿಳಾ ಸಿಬಂದಿಗಳಿಗೆ ಆಪ್ತ ಸಮಾಲೋಚನೆಗಾಗಿ ಮೂಲ ಕೌಶಲ್ಯ ಅಭಿವೃದ್ಧಿಗಾಗಿ ಎರಡು ದಿನಗಳ ಕಾರ್ಯಗಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ನಡೆಸಲಾಯಿತು.

ಕಾರ್ಯಾಗಾರದಲ್ಲಿ ಸಿಡಬ್ಸ್ಯುಸಿ ಸದಸ್ಯೆ ಶೋಭಾ, ಡೀಡ್ಸ್ ಸಂಸ್ಥೆ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಸಂತ ಅಲೋಶೀಯಸ್ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ|ರೋಶನ್, ಕು ಶ್ವೇತಾ ರಸ್ಕೀನ್ಹಾ ಆಪ್ತ ಸಮಾಲೋಚನೆಯ ಅಗತ್ಯತೆ, ವಿಧಾನಗಳು ಪ್ರಾಧಾನ್ಯತೆ, ಆಪ್ತ ಸಮಾಲೋಚನೆಗೆ ಇರಬೇಕಾದ ಕೌಶಲ್ಯ ಆಲಿಸುವ ಮತ್ತು ಪ್ರತಿಕ್ರಿಯಿಸುವ ಕೌಶಲ್ಯ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಿರುತ್ತಾರೆ.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ ವಿಕ್ರಮ್ ಅಮಟೆ, ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧಿಕ್ಷಕ ದಿನಕರ ಶೆಟ್ಟಿ ಹಾಜರಿದ್ದು ಸಿಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.


Spread the love

Exit mobile version