Home Mangalorean News Kannada News ಪೌರತ್ವ ದಾಖಲೆ ಕೇಳಲು ಬಂದವರಿಗೆ ರಾಷ್ಟ್ರಧ್ವಜ ತೋರಿಸಿ ; ಪತ್ರಕರ್ತ ರಾ. ಚಿಂತನ್

ಪೌರತ್ವ ದಾಖಲೆ ಕೇಳಲು ಬಂದವರಿಗೆ ರಾಷ್ಟ್ರಧ್ವಜ ತೋರಿಸಿ ; ಪತ್ರಕರ್ತ ರಾ. ಚಿಂತನ್

Spread the love

ಪೌರತ್ವ ದಾಖಲೆ ಕೇಳಲು ಬಂದವರಿಗೆ ರಾಷ್ಟ್ರಧ್ವಜ ತೋರಿಸಿ ; ಪತ್ರಕರ್ತ ರಾ. ಚಿಂತನ್

ಉಡುಪಿ: ಭಾರತಕ್ಕೆ ಟ್ರಂಪ್ ಭೇಟಿ ವಿಚಾರ ಗುಜರಾತಲ್ಲಿ 100 ಕೋಟಿಯ ಗೋಡೆ ಕಟ್ಟಲಾಗುತ್ತಿದೆ. ಗೋಡೆ ಕಟ್ಟುವ ಬದಲು 100 ಮನೆಗಳನ್ನು ಬಡವರಿಗೆ ಕಟ್ಟಿಕೊಟ್ಟಿದ್ದರೆ ಅದಕ್ಕಿಂತ ದೊಡ್ಡ ಉತ್ತಮ ಕೆಲಸ ಬೆರೋಂದಿಲ್ಲ ಎಂದು ಪತ್ರಕರ್ತರಾದ ರಾ. ಚಿಂತನ್ ಹೇಳಿದರು.

ಅವರು ಶನಿವಾರ ಬೆಳಪು ಕ್ರೀಡಾಂಗಣದಲ್ಲಿ ಬೆಳಪು –ಮಲ್ಲಾರು ಮುಸ್ಲಿಂ ಒಕ್ಕೂಟ ಆಯೋಜಿಸಿದ್ದ ಪೌರತ್ವ ಕಾಯಿದೆಯ ವಿರುದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಮಾಧ್ಯಮದವರು ಪೂರ್ವಾಗ್ರಹ ಪೀಡಿತರಾಗುತ್ತಿದ್ದಾರೆ. ಸಂಸತ್ ಆವರಣದಲ್ಲಿ ಗೋಡ್ಸೆಗೆ ಜಿಂದಾಬಾದ್ ಹೇಳಿದ ಸಾಧ್ವಿ ಪ್ರಜ್ಞಾ ಸಿಂಗ್ ಬಗ್ಗೆ ಒಂದು ವಾರದ ಸುದ್ದಿ ಮಾಡಲ್ಲದ ಅದರ ಬದಲಾಗಿ ಇತರ ಕ್ಷುಲ್ಲಕ ವಿಚಾರಗಳನ್ನು ದಿನಗಟ್ಟಲೆ ಸುದ್ದಿ ಮಾಡುತ್ತಾರೆ.

ಭಾರತೀಯರಿಗೆ ಎನ್‌ಆರ್‌ಸಿಯಿಂದ ತೊಂದರೆ ಇಲ್ಲ ಎನ್ನುವುದನ್ನು ಪ್ರಧಾನಿ ಹೇಳಿದ್ದಾರೆ. ಅದೇ ರೀತಿ ಇದರಿಂದ ಆದಿವಾಸಿ ಗಳಿಗೆ ಅಲೆಮಾರಿಗಳಿಗೂ ತೊಂದರೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳ ಮೇಲೂ ಪರಿಣಾಮ ಬೀರುತ್ತದೆ. ಪೌರತ್ವ ಕಾಯಿದೆಯ ನೆಪದಲ್ಲಿ ಧರ್ಮದ ನಡುವೆ ವ್ಯಾಪಾರ ಯುದ್ಧ ಬೇಡ ಹಿಂದೂ ಮುಸಲ್ಮಾನರು ಅಣ್ಣತಮ್ಮಂದಿರಂತೆ ಬದುಕಬೇಕು ಪೌರತ್ವ ದಾಖಲೆ ಕೇಳಲು ಬಂದವರಿಗೆ ರಾಷ್ಟ್ರಧ್ವಜ ತೋರಿಸಿ ಎಂದರು.

ಪಾಕಿಸ್ತಾನ್ ಜಿಂದಾಬಾದ್ ಹೇಳಿದ ಅಮೂಲ್ಯಗೆ ಹಿಂದೂಸ್ಥಾನ್ ಜಿಂದಾಬಾದ್ ಮೂಲಕ ಟಾಂಗ್ ನೀಡಿದ ಚಿಂತನ್ ಆಯೋಜಕರು ವೇದಿಕೆಯನ್ನು ನೀಡುವುವಾಗ ವಿವೇಕದಿಂದ ವೇದಿಕೆಯನ್ನು ಕೊಡಬೇಕು. ಇಲ್ಲದಿದ್ದರೆ ಫ್ರೀಡಂ ಪಾರ್ಕ್ ನ ಟೆರರಿಸ್ಟ್ ರಾಷ್ಟ್ರದ ಘೋಷಣೆ ಮೊಳಗುತ್ತದೆ. ಅಮೂಲ್ಯ ಉದ್ದೇಶ ಏನೇ ಇರಲಿ ನಾಲಗೆಗೆ ಹಿಡಿತ ಇರಬೇಕು. ವಿರೋಧಿ ದೇಶದ ಪರ ಜೈಕಾರ ಕೂಗುವವರಿಗೆ ವೇದಿಕೆ ಕೊಡಬಾರದು. ಫ್ರೀಡಂ ಪಾರ್ಕ್ ಹೇಳಿಕೆ ಎಲ್ಲರೂ ಖಂಡಿಸಲೇಬೇಕು ಎಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಇಕ್ಬಾಲ್ ಬೆಳ್ಳಾರೆ, ಮಹಮ್ಮದ್ ರಜೀಬ್ ಉದಯ್ ಕುಮಾರ್ ತಲ್ಲೂರು, ಆಲಿ ಉಮ್ಮರ್ ಕಾಪು, ದೇವಿಪ್ರಸಾದ್ ಶೆಟ್ಟಿ, ಎಮ್ ಎ ಗಫೂರ್, ಶಾರೂಖ್ ತೀರ್ಥಹಳ್ಳಿ, ಯುಸಿ ಶೇಖಬ್ಬ, ಫಹೀಮ್ ಬೆಳಪು, ವಂ|ಹೆರಾಲ್ಡ್ ಪಿರೇರಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version