Home Mangalorean News Kannada News ಪ್ರಶಾಂತ್ ನಿಲಯದಲ್ಲಿ ಬಿ ಕೆ ಹರಿಪ್ರಸಾದ್ ಜನ್ಮದಿನ ಆಚರಣೆ

ಪ್ರಶಾಂತ್ ನಿಲಯದಲ್ಲಿ ಬಿ ಕೆ ಹರಿಪ್ರಸಾದ್ ಜನ್ಮದಿನ ಆಚರಣೆ

Spread the love

ಪ್ರಶಾಂತ್ ನಿಲಯದಲ್ಲಿ ಬಿ ಕೆ ಹರಿಪ್ರಸಾದ್ ಜನ್ಮದಿನ ಆಚರಣೆ

ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನೇತರರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ, ನಾಲ್ಕು ಅವಧಿಗಳಿಗೆ ರಾಜ್ಯ ಸಭಾ ಸದಸ್ಯರಾಗಿ ಸಂಸತ್ತಿನಲ್ಲಿ ಸದಾ ಜನ ಪರ ಧ್ವನಿಯಾಗಿ ಜನಮನ ಗೆದ್ದ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರ ಜನ್ಮ ದಿನವನ್ನು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ನಗರದ ಪ್ರಶಾಂತ್ ನಿಲಯದ ಆಶ್ರಮವಾಸಿಗಳಿಗೆ ಮಧ್ಯಾಹ್ನದ ಬೋಜನ ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಈ ವೇಳೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಸ್ವಾಗತಿಸಿದರು. ದ.ಕ. ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಸದಾಶಿವ ಉಳ್ಳಾಲ್ ವಂದಿಸಿದರು. ಪನಾಮ ಕಾರ್ಪೊರೇಶನ್ ನ ಉದ್ಯಮಿ ವಿವೇಕ್ ರಾಜ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಜೆಸಿಂತಾ ವಿಜಯ್ ಆಲ್ಫ್ರೆಡ್, ಕವಿತಾ ಸನಿಲ್, ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಕುಮಾರಿ ಅಪ್ಪಿ.ಎಸ್., ಜಿಂ.ಪಂ.ಸದಸ್ಯ ಶಾಹುಲ್ ಹಮೀದ್, ನೀರಜ್ ಚಂದ್ರ ಪಾಲ್, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ನಿತ್ಯಾನಂದ ಶೆಟ್ಟಿ, ರಕ್ಷಿತ್ ಸುವರ್ಣ, ನಝೀರ್ ಬಜಾಲ್, ಭುವನ್ ಕರ್ಕೇರ, ಶೋಭಾ ಪಡೀಲ್, ಶಶಿಕಲಾ, ಸಿಸ್ಟರ್ ಮರ್ಸಿಲಿನ್ ಬ್ರಾಗ್ಸ್, ಸಿಸ್ಟರ್ ಡೊರೊಪ್ಸ್, ಮಹೇಶ್ ಕೋಡಿಕಲ್ , ಶೌನಕ್ ರೈ, ಶ್ಯಾಮ್ ರಾಯ್ ಸುವರ್ಣ, ಅದ್ದು ಕೃಷ್ಣಾಪುರ, ಸುರೇಶ್ ಪೂಜಾರಿ, ಶರೀಫ್ ದೇರಳಕಟ್ಟೆ, ಅಶ್ರಫ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version