ಬಂಟ್ವಾಳದ ಕುರ್ನಾಡು ಗ್ರಾಮದಲ್ಲಿ 2019 ರಿಂದ ವ್ಯಕ್ತಿ ಕಾಣೆ – ಮಾಹಿತಿ ನೀಡಲು ಪೊಲೀಸರ ಮನವಿ
ಮಂಗಳೂರು: ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಎಂಬಲ್ಲಿ “ಗುರುಲೀಲಾ” ಎಂಬ ಹೆಸರಿನ ಚಿಕನ್ ಸೆಂಟರ್ ನಡೆಸುತ್ತಿದ್ದ ಶ್ರೀಧರ್ (48) ಎಂಬ ವ್ಯಕ್ತಿ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪಿರ್ಯಾದುದಾರರ ಹೇಳಿಕೆಯ ಪ್ರಕಾರ, ಶ್ರೀಧರ್ ಅವರು 2019ರ ಮಾರ್ಚ್ 18ರಂದು ಬೆಳಿಗ್ಗೆ 6.00 ಗಂಟೆಗೆ ಎಂದಿನಂತೆ ತಮ್ಮ ಚಿಕನ್ ಸೆಂಟರ್ ಅಂಗಡಿಗೆ ತೆರಳಿ ವ್ಯಾಪಾರ ಪ್ರಾರಂಭಿಸಿದ್ದರು. ಬೆಳಿಗ್ಗೆ 8.30 ಗಂಟೆ ವೇಳೆಗೆ ಅಂಗಡಿ ಬಾಗಿಲು ಮುಚ್ಚಿಕೊಂಡು ಎಲ್ಲಿಗೋ ತೆರಳಿ, ಬಳಿಕ ಅಂಗಡಿಗೂ ಮನೆಗೂ ಮರಳದೇ, ಅವರ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ.
ಕಾಣೆಯಾದವರ ವಿವರಗಳು:
ಹೆಸರು: ಶ್ರೀಧರ್
ವಯಸ್ಸು: 48 ವರ್ಷ
ಎತ್ತರ: ಸುಮಾರು 175 ಸೆ.ಮೀ
ಮೈಬಣ್ಣ: ಗೋಧಿ ಬಣ್ಣ
ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು
ಧರಿಸಿದ ಉಡುಗೆ: ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬೂದು ಬಣ್ಣದ ಉದ್ದತೋಳಿನ ಶರ್ಟ್
ತಿಳಿದಿರುವ ಭಾಷೆಗಳು: ಕನ್ನಡ, ಹಿಂದಿ, ಮಲಯಾಳಂ, ತುಳು
ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದು — ಕಾಣೆಯಾದ ಶ್ರೀಧರ್ ಎಂಬವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವಾಗಿ ಸಂಪರ್ಕಿಸಲು ವಿನಂತಿಸಿದ್ದಾರೆ.
ಸಂಪರ್ಕಿಸಲು:
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ: 0824-2220800
ಕೊಣಾಜೆ ಪೊಲೀಸ್ ಠಾಣೆ: 0824-2220536 / 9480802350
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
