Home Mangalorean News Kannada News ಬಾಬರಿ ಮಸೀದಿ ಧ್ವಂಸ ದಿನ; ದಕ್ಷಿಣ ಕನ್ನಡದಲ್ಲಿ ಡಿ.6ರಂದು ನಿಷೇಧಾಜ್ಞೆ ಜಾರಿ

ಬಾಬರಿ ಮಸೀದಿ ಧ್ವಂಸ ದಿನ; ದಕ್ಷಿಣ ಕನ್ನಡದಲ್ಲಿ ಡಿ.6ರಂದು ನಿಷೇಧಾಜ್ಞೆ ಜಾರಿ

Spread the love

ಬಾಬರಿ ಮಸೀದಿ ಧ್ವಂಸ ದಿನ; ದಕ್ಷಿಣ ಕನ್ನಡದಲ್ಲಿ ಡಿ.6ರಂದು ನಿಷೇಧಾಜ್ಞೆ ಜಾರಿ

ಮಂಗಳೂರು : ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಲಾಗಿದೆ.

ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ರಂದು  ಎಸ್.ಡಿ.ಪಿ.ಐ (SDPI) ಮತ್ತು  ಹಿಂದೂ ಸಂಘಟನೆಗಳು ಡಿ.6ರ ಬುಧವಾರ ಪ್ರತ್ಯೇಕ ಸಭೆಗಳನ್ನು ನಡೆಸಲು ಸಿದ್ಧತೆ ನಡೆಸಿದ್ದವು, ಆದ್ದರಿಂದ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ನಿಷೇಧಾಜ್ಞೆಯ ವೇಳೆಯಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆ ಮಾಡದಂತೆ ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು ನಿಷೇಧಾಜ್ಞೆ ಹೇರಿ ಆದೇಶ ಹೊರಡಿಸಿದ್ದಾರೆ.


Spread the love

Exit mobile version