Home Mangalorean News Kannada News ಬಿಎಸ್​ವೈ ಸಚಿವ ಸಂಪುಟ​;    ಕೋಟ ಶ್ರೀನಿವಾಸ ಪೂಜಾರಿ ಸೇರಿ 17 ಮಂದಿ ಪ್ರಮಾಣವಚನಕ್ಕೆ ಸಿದ್ದ

ಬಿಎಸ್​ವೈ ಸಚಿವ ಸಂಪುಟ​;    ಕೋಟ ಶ್ರೀನಿವಾಸ ಪೂಜಾರಿ ಸೇರಿ 17 ಮಂದಿ ಪ್ರಮಾಣವಚನಕ್ಕೆ ಸಿದ್ದ

Spread the love

ಬಿಎಸ್​ವೈ ಸಚಿವ ಸಂಪುಟ​;    ಕೋಟ ಶ್ರೀನಿವಾಸ ಪೂಜಾರಿ ಸೇರಿ 17 ಮಂದಿ ಪ್ರಮಾಣವಚನಕ್ಕೆ ಸಿದ್ದ

ಬೆಂಗಳೂರು: ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ನಿನ್ನೆ ಮಧ್ಯರಾತ್ರಿಯೇ ಬಿಜೆಪಿ ಹೈಕಮಾಂಡ್​ ಕೊನೆಗೂ ಪಟ್ಟಿ ಅಂತಿ ಮಾಡಿದ್ದು, 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಫೋನ್​​ ಮಾಡಿ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ತಿಳಿಸಿದರು. ಬಳಿಕ ಹೈಕಮಾಂಡ್​​ ಅಂತಿಮಗೊಳಿಸಿದ್ದ ಶಾಸಕರಿಗೆ ಯಡಿಯೂರಪ್ಪನವರೇ ಖುದ್ದು ಫೋನ್​​ ಮಾಡಿ, ಇಂದು ಮಂಗಳವಾರ ಬೆಳಗ್ಗೆ 11.30ಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.

ಬಿಜೆಪಿ ಹೈಕಮಾಂಡ್​​ ಕೊನೆಗೂ ನೂತನ ಸಚಿವರ ಪಟ್ಟಿ ಫೈನಲ್ ಮಾಡಿದೆ. 17 ಸಚಿವರ ಹೆಸರನ್ನು ವರಿಷ್ಠರು ಫೈನಲ್ ಮಾಡಿದ್ದಾರೆ. ಒಬ್ಬ ಪಕ್ಷೇತರ ಸೇರಿದಂತೆ 16 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಚಿವರ ಅಂತಿಮ ಪಟ್ಟಿ ಹೀಗಿದೆ…

  1. ಗೋವಿಂದ ಕಾರಜೋಳ
  2. ಅಶ್ಚಥ್ ನಾರಯಣ್
  3. ಲಕ್ಷ್ಮಣ್ ಸವಧಿ
  4. ಕೆ ಎಸ್ ಈಶ್ಚರಪ್ಪ
  5. ಆರ್ ಅಶೋಕ್
  6. ಜಗದೀಶ್ ಶೆಟ್ಟರ್
  7. ಶ್ರೀರಾಮುಲು
  8. ಸುರೇಶ್ ಕುಮಾರ್
  9. ವಿ ಸೋಮಣ್ಣ
  10. ಸಿ ಟಿ ರವಿ
  11. ಬಸವರಾಜ್ ಬೊಮ್ಮಾಯಿ
  12. ಕೋಟಾ ಶ್ರೀನಿವಾಸ್ ಪೂಜಾರಿ
  13. ಮಾಧುಸ್ವಾಮಿ
  14. ಸಿ ಸಿ ಪಾಟೀಲ್
  15. ಹೆಚ್ ನಾಗೇಶ್
  16. ಪ್ರಭು ಚೌಹಾಣ್
  17. ಶಶಿಕಲಾ ‌ಜೊಲ್ಲೆ

Spread the love

Exit mobile version