ಬಿಜೆಪಿಯವರಿಂದ ರಾಜಕೀಯ ದಿವಾಳಿತನದ ಪ್ರದರ್ಶನ: ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಖ್ಯಾತ ಬರಹಗಾರ್ತಿ, ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರವರು ನಾಡ ಹಬ್ಬ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರರದ್ದು ರಾಜಕೀಯ ದಿವಾಳಿತನದ ಪ್ರದರ್ಶನವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಾಡ ಹಬ್ಬ ದಸರಾ ಯಾವುದೇ ಜಾತಿ, ಧರ್ಮ, ಭಾಷೆಗೆ ಸ್ಥಿಮಿತವಾದ ಹಬ್ಬವಲ್ಲಾ ಇದು ಸಮಸ್ತ ಕನ್ನಡಿಗರ ಹಬ್ಬ, ಆರು ಕೋಟಿ ಕನ್ನಡಿಗರು ಶ್ರದ್ದೆ, ಭಕ್ತಿಯ ಜೊತೆ ವಿಜೃಂಭಣೆಯಿಂದ ಆಚರಿಸುವ ಹಬ್ಬ, ಕನ್ನಡನಾಡಿಗೆ ಜಾತಿ, ಧರ್ಮ, ಮತ ಭೇದ ಮಾಡದೆ ಎಲ್ಲರಿಗೂ ಆರೋಗ್ಯ, ಶಿಕ್ಷಣ, ವಸತಿ, ನೀರಾವರಿ ಇತ್ಯಾದಿ ಇತ್ಯಾದಿ ನೀಡಿದ ಮೈಸೂರು ಸಂಸ್ಥಾನದಿಂದ ಪ್ರಾರಂಭವಾದ ನಾಡಹಬ್ಬ ದಸರಾ ಇಂದು ಸರ್ಕಾರಿ ಪ್ರಯೋಜಕತ್ವದಲ್ಲಿ ನಡೆಯುತ್ತಿದೆ, ಹಿಂದೆ ಮುಸಲ್ಮಾನ್ ಸಮುದಾಯದ ಕವಿ ಕೆ ಎಸ್ ನಿಸ್ಸಾರ್ ಅಹಮದ್ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ದರು, ಇಂದು ಸರ್ಕಾರ ಶ್ರೇಷ್ಠ ಬರಹಗಾರ್ತಿ ಬಾನು ಮುಷ್ತಾಕ್ ರವರ ಮೂಲಕ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ಸರ್ವ ಜನಾಂಗದ ಶಾಂತಿಯ ತೋಟವಾದ ಕರುನಾಡಿನ ಸಹೋದರತೆ, ಸಹಬಾಳ್ವೆಯನ್ನು ವಿಶ್ವಕ್ಕೆ ತೋರಿಸಿದಂತಾಗಿದೆ. ಬಿಜೆಪಿ ನಾಯಕರುಗಳಿಗೆ ಮುಸಲ್ಮಾನ್ ಬಂಧುಗಳ ವ್ಯಾಪಾರ, ವ್ಯವಹಾರ ನಡೆಸಲು, ಚುನಾವಣೆಗೆ, ಇವರ ಬೇರೆ ಬೇರೆ ಅದು ಧಾರ್ಮಿಕ ಕಾರ್ಯಕ್ರಮಗಳಿಗೆ ಕೂಡ ಅವರಿಂದ ಆರ್ಥಿಕ ಸಹಾಯ ಪಡೆಯಲು, ಚುನಾವಣೆಯಲ್ಲಿ ಮತ ಪಡೆಯಲು ಇದ್ಯಾವುದೂ ತೊಂದರೆಯಿಲ್ಲಾ ಆದರೆ ಸರ್ವ ಧರ್ಮಿಯರು ವಿಜೃಂಭಣೆಯಿಂದ ಆಚರಿಸುವ ನಾಡಹಬ್ಬದ ಉದ್ಘಾಟನೆಯನ್ನು ಮಾತ್ರ ಮುಸಲ್ಮಾನ್ ಸಮುದಾಯದವರು ಮಾಡಬಾರದು ಎನ್ನುವುದು ಬಿಜೆಪಿಯವರು ರಾಜಕೀಯ ದಿವಾಳಿತನದ ಪ್ರದರ್ಶನವೆಂದು ಕೆ. ವಿಕಾಸ್ ಹೆಗ್ಡೆ ಆಕ್ರೋಶ ಹೊರಹಾಕಿದ್ದಾರೆ.