ಬೆಂಗಳೂರಿಂದ ಮಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೂವರು ಸಿಸಿಬಿ ಬಲೆಗೆ
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ತಂಡವನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂಧಿತರನ್ನು ಮಂಗಳೂರು ಉಳಾಯಿಬೆಟ್ಟು ನಿವಾಸಿ ಅಹಮ್ಮದ್ ಸಬಿತ್ (35), ಕೈಕಂಬ ನಿವಾಸಿ ಮಹಮ್ಮದ್ ಸಂಶೀರ್ ಮತ್ತು ಇವರಿಗೆ ಸಹಕರಿಸಿದ ಮಹಿಳೆ ನೌಶೀನಾ (27) ಎಂದು ಗುರುತಿಸಲಾಗಿದೆ
ಪೊಲೀಸರಿಗೆ ಅನುಮಾನ ಬಾರದಂತೆ ಇವರ ತಂಡದಲ್ಲಿ ಮಹಿಳೆಯೊಬ್ಬರುನ್ನು ಸೇರಿಸಿಕೊಂಡು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಆರೋಪಿಗಳಿಂದ 90 ಗ್ರಾಂ ಎಮ್ ಡಿ ಎಮ್ ಎ ವಶಪಡಿಸಿಕೊಂಡಿದ್ದು, ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
