Home Mangalorean News Kannada News ಬೆಂದೂರು ಸಂತ ತೆರೇಸಾ ಶಾಲೆಯ ವಾರ್ಷಿಕೋತ್ಸವ

ಬೆಂದೂರು ಸಂತ ತೆರೇಸಾ ಶಾಲೆಯ ವಾರ್ಷಿಕೋತ್ಸವ

Spread the love

ಬೆಂದೂರು ಸಂತ ತೆರೇಸಾ ಶಾಲೆಯ ವಾರ್ಷಿಕೋತ್ಸವ

ಸಂತ ತೆರೇಸಾ ಶಾಲೆ, ಬೆಂದೂರು ತನ್ನ ವಾರ್ಷಿಕೋತ್ಸವ ದಿನವನ್ನು ವಿಜ್ರಂಭಣೆಯಿಂದ 23 ನವೆಂವರ್, 2018ರಂದು “ಒರೆಂಡಾ-ಗುಣಮುಖ ಮಾಡುವ ಶಕ್ತಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಿಕೊಂಡಿತು.

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಧ್ಯಮಿಕ ವಿಭಾಗ, ಬೆಂಗಳೂರು ಇದರ ನಿರ್ದೇಶಕರಾದ ಫಿಲೋಮಿನಾ ಲೋಬೊರವರು ವೇದಿಕೆಯನ್ನು ಆಲಂಕರಿಸಿ, ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ವಋಂದವನ್ನು ಹೃತ್ಪೂರ್ವಕವಾಗಿ ಅಭಿನಂದನೆಗೈದರು. ಹಾಗೆಯೇ ಶಾಲೆಯ ಶಿಕ್ಷಕರು ಮಕ್ಕಳನ್ನು ಉತ್ತಮ ಮಾರ್ಗದೆಡೆಗೆ ನಡೆಸಬೇಕೆಂಬ ಉತ್ತಮ ಸಂದೇಶವನ್ನು ನೀಡಿದರು.

ಗೌರವಾರ್ಥ ಅತಿಥಿಯಾಘಿ, ಸಂತ ಸೆಬಾಸ್ಟಿಯನ್ ಚರ್ಚ್, ಬೆಂದೂರು, ಇದರ ಧರ್ಮಗುರುಗಳಾದ ರೆ| ಫಾ| ವಿನ್ಸೆಂಟ್ ಮೊಂತೆರೋರವರು ಹಾಜರಿದ್ದರು. ಹಾಗೇಯೇ ಬೆಥನಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷೆಯಾದ ಧರ್ಮ ಭಗಿನಿ ಲಿಲ್ಲೀಸ್ ಬಿ.ಎಸ್.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅವರು ಸಂತ ತೆರೇಸಾರವರ ಜೀವನ ಮೌಲ್ಯಗಳನ್ನು ಎತ್ತಿ ಹಿಡಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಮೂಲಕ ಸರಿಯಾದ ಮಾರ್ಗದಲ್ಲಿ ನಡೆಯಲು ಆದೇಶ ನೀಡಿದರು ಎಂಬ ಸ್ಪೂರ್ತಿದಾಯಕ ಮಾತುಗಳಿಂದ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು.

ಶಾಲಾ ಸಂಚಾಲಕರಾದ ಧರ್ಮ ಭಗಿನಿ ಮಾರಿಯೆಟ್ ಬಿ.ಎಸ್.ರವರು ಮುಖ್ಯ ಅತಿಥಿಗಳನ್ನು ಹಾಗೂ ವೇದಿಕೆಯ ಮೇಲೆ ಆಸೀನರಾಗಿದ್ದ ಗಣ್ಯರನ್ನು ಸ್ವಾಗತಿಸಿದರು. ಧರ್ಮ ಭಗಿನಿ ಫಿಲೋಮಿನಾ ಸಲ್ದಾನ್ಹಾ, ಶಾಲೆಯ ಪ್ರಾಂಶುಪಾಲೆ, ಶಾಲೆಯ ಹಾಗೂ ವಿದ್ಯಾರ್ಥಿಗಳ ಸಾಧನೆಗಳ ಮೇಲೆ ಬೆಳಕು ಚೆಲ್ಲಿ, ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು. ಶಾಲೆಯ ಉಪಪ್ರಾಂಶುಪಾಲೆಯಾದ ಧರ್ಮ ಭಗಿನಿ ಶಾಂತಿಯವರು ಕಾರ್ಯಕ್ರಮದ ವಂದನಾರ್ಪಣೆಗೈದರು. ಶಾಲಾ ವಿದ್ಯಾರ್ಥಿಗಳಾದ ಕ್ರೇಗ್ ಫೆರ್ನಾಂಡಿಸ್, ಸಿಮ್ರನ್, ಹಲೀಮಾ ಮತ್ತು ಹಿಮಾಂಶು ಇವರು ಕಾರ್ಯಕ್ರಮದ ನಿರೂಪಣೆಗೈದರು.

ಆರನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಗಾಯಕ ವೃಂದವು ತಮ್ಮವು ಸುಶ್ರಾವ್ಯ ಸಂಗೀತದಿಂದ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ತಮ್ಮ ಅದ್ಭುತ ನೃತ್ಯದ ಮೂಲಕ ಎಂಟನೆಯ ತರಗತಿಯ ವಿದ್ಯಾರ್ಥಿಗಳು ಎಲ್ಲರನ್ನೂ ಸ್ವಾಗತಿಸಿದರು.

ವರ್ಣರಂಜಿತ ಪೋಷಾಕುಗಳೊಂದಿಗೆ ಏಳನೇ ತರಗತಿಯ ವಿದ್ಯಾರ್ಥಿಗಳು, ವಿವಿಧ ಸಾಂಸ್ಕøತಿಕ ಕಲ್ಪನೆಗಳನ್ನು ಪ್ರಸ್ತುತಪಡಿಸಿದರು. “ನಗುವೇ-ಚೇತನ” ಎಂಬ ಹಾಸ್ಯ ನಾಟಕವನ್ನು ಈ ಸಂದರ್ಭದಲ್ಲಿ ಅಭಿನಯಿಸಿ, ನೆರೆದವರ ಮನಗಳನ್ನು ಪುಳಕಿತಗೊಳಿಸಿದರು.

ಒಂಬತ್ತು ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳು “ಒರೆಂಡಾ-ಗುಣಮುಖವಾಗಿಸುವ ಶಕ್ತಿ” ಎಂಬ ಉತ್ತಮ ಸಂದೇಶವನ್ನು ಒಳಗೊಂಡ ನೃತ್ಯ ನಾಟಕವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವು ಪೂರ್ಣವಾಗಿ“ಒರೆಂಡಾ-ಗುಣಮುಖವಾಗಿಸುವ ಶಕ್ತಿ” ಎಂಬಧ್ಯೇಯ ವಾಕ್ಯದ ಮೇಲೆಯೆ ಕೇಂದ್ರೀಕೃತವಾಗಿತ್ತು


Spread the love

Exit mobile version