ಬೆನಿಫಿಟ್ ಸ್ಕೀಮ್ ಮೂಲಕ ಕೋಟಿ ರೂ. ವಂಚನೆ: ಸುಳ್ಯ ನ್ಯಾಯಾಲಯದಲ್ಲಿ ಮೂವರಿಗೆ ಶಿಕ್ಷೆ
ಸುಳ್ಯ: ಬೆನಿಫಿಟ್ ಸ್ಕೀಮ್ ಹೆಸರಿನಲ್ಲಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿ ಕೋಟಿಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಸಮೀಪ ಅಂಬಡೆಡ್ಕದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಶ್ರೀ ತತ್ವಮಸಿ ಎಂಟರ್ಪ್ರೈಸಸ್ (ರಿ) ಹೆಸರಿನಲ್ಲಿ ಬೆನಿಫಿಟ್ ಸ್ಕೀಮ್ ಪ್ರಾರಂಭಿಸಲಾಗಿತ್ತು. ಏಜೆಂಟರ ಮೂಲಕ ಸಾರ್ವಜನಿಕರಿಂದ ಕಂತುಗಳ ಆಧಾರದಲ್ಲಿ ಹಣ ಸಂಗ್ರಹಿಸಿ, 4115 ಸದಸ್ಯರಿಗೆ ಹಣವನ್ನಾಗಲಿ ವಸ್ತುಗಳನ್ನಾಗಲಿ ನೀಡದೆ ಒಟ್ಟು ₹3,08,62,500 ವಂಚನೆ ನಡೆದಿದೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 248/2014ರಲ್ಲಿ ಆರೋಪಿಗಳಾದ 1) ಶಿವಪ್ರಕಾಶ್, 2) ಕೆ.ಪಿ. ಗಣೇಶ್, 3) ಕೆ.ಪಿ. ಕೃಷ್ಣಪ್ಪ ಗೌಡ, 4) ಗೀತಾ ಕೆ.ಎಸ್., 5) ಭಾರತಿ, 6) ಗೀತಾ ಗಣೇಶ್, 7) ಎನ್.ಇ. ವೈ. ಕಮಲಾಕ್ಷ ಮತ್ತು 8) ಕೆ. ನಾಗೇಶ್ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಘಟನೆಯ ಭಾಗಶಃ ತನಿಖೆಯನ್ನು ಆಗಿನ ಠಾಣಾಧಿಕಾರಿ ಬ್ರಿಜೇಶ್ ಮಥ್ಯೂರವರು ನಡೆಸಿದ್ದು, ಮುಂದಿನ ತನಿಖೆಯನ್ನು ಪೂರ್ಣಗೊಳಿಸಿದ ಚಂದ್ರಶೇಖರ್ ಎಚ್.ವಿ. ರವರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ತೀರ್ಪು
ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿ 2, 4 ಮತ್ತು 5 ರವರ ಅಪರಾಧ ಸಾಬೀತಾಗಿ ಅವರನ್ನು ದೋಷಿಗಳೆಂದು ಘೋಷಿಸಲಾಗಿದೆ. ಆಗಾಗಿ:
ಆರೋಪಿ 3, 6, 7 ಮತ್ತು 8 ರವರಿಗೆ ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ
ಆರೋಪಿ 1 ಮರಣ ಹೊಂದಿರುವುದರಿಂದ ಪ್ರಕರಣ ಸ್ಥಗಿತ
ವಿಧಿಸಿದ ಶಿಕ್ಷೆ (03-11-2025)
ದೋಷಿ ಆರೋಪಿಗಳಾದ 2, 4 ಮತ್ತು 5 ರವರಿಗೆ:
ಕಲಂ 406 r/w 149 – 3 ವರ್ಷಗಳ ಸಾದಾ ಕಾರಾಗೃಹ
ಕಲಂ 409 r/w 149 – 3 ವರ್ಷಗಳ ಸಾದಾ ಕಾರಾಗೃಹ + ₹10,000 ದಂಡ
ಕಲಂ 420 r/w 149 – 3 ವರ್ಷಗಳ ಸಾದಾ ಕಾರಾಗೃಹ + ₹10,000 ದಂಡ
ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ವಾದ ಮಂಡಿಸಿದರು.
