Home Mangalorean News Kannada News ಬೆಳ್ತಂಗಡಿ| ಜಾನುವಾರು ಸಾಗಾಟ ಆರೋಪ: 4 ಮಂದಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ| ಜಾನುವಾರು ಸಾಗಾಟ ಆರೋಪ: 4 ಮಂದಿಯ ವಿರುದ್ಧ ಪ್ರಕರಣ ದಾಖಲು

Spread the love

ಬೆಳ್ತಂಗಡಿ| ಜಾನುವಾರು ಸಾಗಾಟ ಆರೋಪ: 4 ಮಂದಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಸ್ಥಳೀಯರೊಬ್ಬರಿಂದ ದನ ಖರೀದಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿ ಸಹಿತ ಪಿಕಪ್ ವಾಹನ ವಶಕ್ಕೆ ಪಡೆದುಕೊಂಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಕ್ಕಿಂಜೆ ನಿವಾಸಿ ಅನಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತೋಮಸ್ ತೋಟತ್ತಾಡಿ ಹಾಗೂ ಕಬೀರ ಹಾಗೂ ದನ ಮಾರಾಟ ಮಾಡಿದ ಕಾನರ್ಪ ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

Exit mobile version