ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಭೇಟಿ
ಮಂಗಳೂರು: ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಸೋಮವಾರ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದಾದ ಅನಾಹುತಗಳನ್ನು ಪರಿಶೀಲಿಸಿದರು.
ನಿಡಿಗಲ್ ಸೇತುವೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸೇತುವೆ ಕ್ಷಮತೆ ಹಾಗೂ ನೀರು ಹರಿಯುವಿಕೆಯನ್ನು ಪರಿಶೀಲಿಸಿದರು. ಬಳಿಕ ಮುಂಡಾಜೆ ಭೇಟಿ ನೀಡಿದ ಅವರು ಗುಡ್ಡ ಕುಸಿತ ಸ್ಥಳಗಳನ್ನು ವೀಕ್ಷಿಸಿದರು. ಪ್ರಾಕೃತಿಕ ದುರಂತಗಳನ್ನು ನಿರ್ವಹಿಸಲು ಪ್ರತೀ ಗ್ರಾಮಗಳಲ್ಲೂ ಅಗತ್ಯ ಸಿದ್ಧತೆಗಳನ್ನು ಮಾಡಿಡುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್ ನರಗುಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮತ್ತಿತ್ತರರು ಇದ್ದರು.
