ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್ ಐ ಟಿ ದಾಳಿ
ಬೆಳ್ತಂಗಡಿ: ಇತ್ತೀಚೆಗೆ ಬಂಧನಕ್ಕೊಳಗಾಗಿ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್ ಐ ಟಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಬೇಲ್ ಮೇಲೆ ಹೊರ ಬಂದಿರುವ ತಿಮರೋಡಿಗೆ ಬಿಸಿಮುಟ್ಟಿಸಿದ್ದು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿ ಚಿನ್ನಯ್ಯನನ್ನು ಜೊತೆ ವಿಶೇಷ ತನಿಖಾ ತಂಡ ಕರೆತಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಉಜಿರೆಯಲ್ಲಿರುವ ತಿಮರೋಡಿ ನಿವಾಸಕ್ಕೆ ಎಸ್ ಐ ಟಿ ಟೀಂ ಎಂಟ್ರಿ ಕೊಟ್ಟು ತನಿಖೆ ನಡೆಸುತ್ತಿದೆ.
ಶವಗಳನ್ನು ಹೂತಿದ್ದೇನೆ ಎಂದುಕೊಂಡು ಸಾಕ್ಷಿದಾರನಾಗಿ ಬಂದಿದ್ದ ಚಿನ್ನಯ್ಯನನ್ನು ಬಂಧಿಸಿ ವಶದಲ್ಲಿಟ್ಟುಕೊಂಡಿರುವ ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪರಿಣಾಮವಾಗಿ ಒಂದೊಂದೇ ಅಸಲಿಯತ್ತು ಬಯಲಾಗತೊಡಗಿದೆ. ಆತನನ್ನು ಎರಡು ದಿನಗಳಿಂದದ ಬೆಂಡಿತ್ತಿರುವ ಎಸ್ಐಟಿ ವಿಚಾರಣೆ ತೀವ್ರಗೊಳಿಸಿದೆ. ಈಗಾಗಲೇ ಎಲ್ಲಾ ಸತ್ಯವನ್ನು ಕಕ್ಕಿರುವ ಚಿನ್ನಯ್ಯ, ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸ್ತಿದ್ದಾನೆ. ಮೊದಲಿಗೆ ದೆಹಲಿ ಲಿಂಕ್ ಕೆದಕಿದ್ದ ಎಸ್ಐಟಿ ಇದೀಗ ಮಂಡ್ಯ, ತಮಿಳುನಾಡಿನಲ್ಲಿ ಆತನಿಗಿದ್ದ ಲಿಂಕ್ ಪತ್ತೆ ಮಾಡಿದೆ.
ಚಿನ್ನಯ್ಯಗೆ ಹೋರಾಟಗಾರ ಮಹೇಶ್ ತಿಮರೋಡಿ ಆಶ್ರಯ ನೀಡಿದ್ದರು ಎನ್ನಲಾಗಿದ್ದು, ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.