ಬ್ರಹ್ಮಾವರ: ಯುವತಿಗೆ ಚೂರಿ ಇರಿತ ಪ್ರಕರಣದ ಆರೋಪಿ ಆರೋಪಿ ಬಾವಿಗೆ ಹಾರಿ ಆತ್ಮಹತ್ಯೆ
ಉಡುಪಿ: ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಕೊಕ್ಕರ್ಣೆ ಚೆಗ್ರಿಬೆಟ್ಟು ನಿವಾಸಿ ರಕ್ಷಿತಾ ಎಂಬ ಯುವತಿಗೆ ಚೂರಿ ಇರಿತ ಮಾಡಿ ತಪ್ಪಿಸಿಕೊಂಡ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಮೃತ ಯುವಕ ಆರೋಪಿ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಆರೋಪಿ ಕಾರ್ತಿಕ್ ಮೃತ ಯುವತಿ ರಕ್ಷಿತಾಳ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಮದುವೆಯಾಗುವ ಇಚ್ಚೆಯನ್ನು ವ್ಯಕ್ತಪಡಿಸಿದ್ದ ಎನ್ನಲಾಗಿದೆ ಆದರೆ ಆಕೆಯ ಮನೆಯವರು ನಿರಾಕರಿಸಿದ್ದರು. ರಕ್ಷಿತಾ ಕೂಡಾ ಆತನನ್ನು ಬ್ಲಾಕ್ ಮಾಡಿದ್ದಳು.
ಇದರಿಂದ ಕುಪಿತಗೊಂಡಿದ್ದ ಆರೋಪಿಯು ರಕ್ಷಿತಾ ಶುಕ್ರವಾರ ಬೆಳಗ್ಗೆ ಕೆಲಸಕ್ಕೆಂದು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ತನ್ನ ಮೋಟರ್ ಸೈಕಲ್ ನಲ್ಲಿ ಬಂದು ಬಂದು ಆತನ ಕೈಯಲ್ಲಿದ್ದ ಚೂರಿಯಿಂದ ರಕ್ಷಿತಾಳ ಹೊಟ್ಟೆಗೆ ಇರಿದು, ಕುತ್ತಿಗೆಗೆ ಕೊಯ್ದು, ಗಂಭೀರವಾಗಿ ಹಲ್ಲೆ ನಡೆಸಿ ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಓಡಿಹೋಗಿರುತ್ತಾನೆ. ಸಂಜೆಯ ವೇಳೆ ಆತನ ಮೃತದೇಹ ರಕ್ಷಿತಾಳ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಗಂಭೀರ ಗಾಯಗೊಂಡು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದು ರಕ್ಷಿತಾ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಸಂಜೆಯ ಹೊತ್ತಿಗೆ ಮೃತಪಟ್ಟಿರುತ್ತಾಳೆ
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.