Home Mangalorean News Kannada News ಭಾರತೀಯ ಜನತಾ ಪಾರ್ಟಿಗೂ – ಜಗನ್ನಿವಾಸ ರಾವ್‌ಗೂ ಸಂಬಂಧ ಇಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ...

ಭಾರತೀಯ ಜನತಾ ಪಾರ್ಟಿಗೂ – ಜಗನ್ನಿವಾಸ ರಾವ್‌ಗೂ ಸಂಬಂಧ ಇಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸ್ಪಷ್ಟನೆ

Spread the love

ಭಾರತೀಯ ಜನತಾ ಪಾರ್ಟಿಗೂ – ಜಗನ್ನಿವಾಸ ರಾವ್‌ಗೂ ಸಂಬಂಧ ಇಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸ್ಪಷ್ಟನೆ

ಮಂಗಳೂರು: ಪುತ್ತೂರಿನಲ್ಲಿ ಕೃಷ್ಣ ರಾವ್ ಎಂಬಾತ ಪ್ರೇಮ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷವು ಕೃಷ್ಣ ರಾವ್ ತಂದೆ ಜಗನ್ನಿವಾಸ ರಾವ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಗನ್ನಿವಾಸ ರಾವ್ ಅವರನ್ನು ಬಿಜೆಪಿ ಮುಖಂಡ ಎನ್ನುವುದು ತಪ್ಪು. ನಾನು ಅಂದೇ ಈ ಪ್ರಕರಣವನ್ನು ಖಂಡಿಸಿ, ಜಗನ್ನಿವಾಸ ರಾವ್ ಅವರಿಗೆ ನೊಟೀನ್ ನೀಡಿ, ನಿಮ್ಮ ಈ ಅಂತರಿಕ ವಿಚಾರವನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದ್ದೇನೆ. ಆದರೆ ಪುತ್ತೂರು ಶಾಸಕರ ಮುಂದಾಳತ್ವದಲ್ಲಿ ವಿವಾದ ಬಗೆಹರಿಸುವುದಾಗಿ ಹೇಳಿದ್ದರು.

ಈಗ ಅವರು ಭಾರತೀಯ ಜನತಾ ಪಾರ್ಟಿ ಜೊತೆಗೆ ಸಂಬಂಧ ಇಲ್ಲ. ಬಿಜೆಪಿಗೂ ಜಗನ್ನಿವಾಸ ರಾವ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಸತೀಶ್ ಕುಂಪಲ ಸ್ಪಷ್ಟಪಡಿಸಿದ್ದಾರೆ.


Spread the love

Exit mobile version