Home Mangalorean News Kannada News ಮಂಗಳಾ ಸವಿರುಚಿ ಕ್ಯಾಂಟೀನ್ ಉದ್ಘಾಟನೆ

ಮಂಗಳಾ ಸವಿರುಚಿ ಕ್ಯಾಂಟೀನ್ ಉದ್ಘಾಟನೆ

Spread the love

ಮಂಗಳಾ ಸವಿರುಚಿ ಕ್ಯಾಂಟೀನ್ ಉದ್ಘಾಟನೆ

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 24 ರಂದು ಬಿಜೈನಲ್ಲಿರುವ ಜಿಲ್ಲಾ ಸ್ತ್ರೀಶಕ್ತಿಭವನದಲ್ಲಿ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಸ್ತ್ರೀಶಕ್ತಿ ಸದಸ್ಯರಿಂದಲೇ ನಿರ್ವಹಿಸುವ “ಮಂಗಳಾ ಸವಿರುಚಿ ಕ್ಯಾಂಟೀನ್”ನ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ನೆರವೇರಿಸಿದರು.

ಮಹಿಳೆಯರು ಗುಣಮಟ್ಟದ ಸೇವೆಯನ್ನು ನೀಡಿ ನಗರ ಪ್ರದೇಶದ ಉದ್ಯಮಿಗಳಿಗೆ ಸಮಾನ ರೀತಿ ಸ್ಪರ್ಧಿಸಿ, ಆರ್ಥಿಕವಾಗಿ ಸಬಲರಾಗಬೇಕೆಂದು ಅವರು ನೀಡಿದರು. ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಕೂಡಾ ಇದೆ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ ಕೆ ಮೊಯಿಲಿ ಉಪಸ್ಥಿತರಿದ್ದರು.


Spread the love

Exit mobile version