Home Mangalorean News Kannada News ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಮರು ಸ್ಥಾಪನೆ

ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಮರು ಸ್ಥಾಪನೆ

Spread the love

ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಮರು ಸ್ಥಾಪನೆ

ಮಂಗಳೂರು: ಪಂಪ್‌ವೆಲ್ ಮೇಲ್ಸ್ತುವೆ ನಿರ್ಮಾಣದ ವೇಳೆ(2016ರಲ್ಲಿ) ತೆರವುಗೊಳಿಸಲಾಗಿದ್ದ ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಮರು ಸ್ಥಾಪನೆ ಮಾಡಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ತೆರಳುವ ರಸ್ತೆಯ ಮಧ್ಯದಲ್ಲಿರುವ ವೃತ್ತದಲ್ಲಿ ಕಲಶ ಇರಿಸಲಾಗಿದೆ.

ಕೆಲದಿನಗಳ ಹಿಂದೆ ರಾತ್ರಿ 8.30ಕ್ಕೆ ಆರಂಭಿಸಲಾದ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು ಮಂಗಳವಾರ ನಸುಕಿನ ಜಾವ 4.30ಕ್ಕೆ. ಪೊಲೀಸ್ ಇಲಾಖೆ, ಮೆಸ್ಕಾಂ ಸಿಬಂದಿ ಹಾಗೂ ಸ್ಥಳೀಯ ಯುವಕರ ಸಹಕಾರದಿಂದ ಕಲಶ ಮರುಸ್ಥಾಪನೆ ಮಾಡಲಾಗಿದೆ. ಮಂಗಳೂರು ಜೈನ್‌ ಸೊಸೈಟಿ ಅಧ್ಯಕ್ಷ ಪುಷ್ಪರಾಜ್‌ ಜೈನ್, ಕಾರ್ಯದರ್ಶಿ ಸಚಿನ್ ಕುಮಾರ್, ಕೋಶಾಧಿಕಾರಿ ವಿಜೇಶ್ ಬಳ್ಳಾಲ್, ಹಿಂದೂ ಮುಖಂಡ ಶರಣ್ ಪಂಪ್‌ವೆಲ್, ಮಾಜಿ ಕಾರ್ಪೊರೇಟ‌ರ್ ಸಂದೀಪ್ ಗರೋಡಿ, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು 40ಕ್ಕೂ ಅಧಿಕ ಮಂದಿ ಸ್ಥಳಾಂತರದ ವೇಳೆ ನೆರವಾದರು.

ವಿವಿಧ ಆಡೆತಡೆ ಮೀರಿ ಮರುಸ್ಥಾಪನೆ 30 ಅಡಿ ಎತ್ತರದ ಕಲಶವನ್ನು ಕಂಕನಾಡಿ ರಸ್ತೆಯಿಂದ ಪಡೀಲ್ ರಸ್ತೆಗೆ ರವಾನಿಸಲು ಪ್ಲೆ$ಂಓವರ್ ಅಡಿಯಿಂದ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಟ್ರೇಲರ್‌ನಲ್ಲಿ ನಂತೂರು ಮೂಲಕ ಕೊಂಡೊಯ್ಯುವ ನಿರ್ಧಾರ ಮಾಡಲಾಯಿತು. ಆದರೆ, ಹೆದ್ದಾರಿಯಲ್ಲಿದ್ದ (ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಬಳಿ) ಸೈನ್‌ಬೋರ್ಡ್ ಅಡ್ಡಿಯಾಗಿದ್ದು, ನಂತೂರು ವರೆಗೆ ತೆರಳಿದ ಟ್ರೇಲರ್ ಅಲ್ಲಿ ಯು ಟರ್ನ್ ಹೊಡೆದು ಅದೇ ರಸ್ತೆಯಲ್ಲಿ ಮರಳಿತು. ಬಳಿಕ ಜಪ್ಪಿನಮೊಗರು ವರೆಗೆ ವಿರುದ್ಧ ದಿಕ್ಕಿನಲ್ಲಿ ಕೊಂಡೊಯ್ದು, ಅಲ್ಲಿ ಟ್ರೇಲರ್ ಮತ್ತೊಂದು ಬದಿಯ ರಸ್ತೆಗೆ ತೆರಳಿ ಅಲ್ಲಿಂದ ಸರ್ವಿಸ್ ರಸ್ತೆಯ ಮೂಲಕ ಪಂಪ್‌ವೆಲ್‌ನ ಪಡೀಲ್ ರಸ್ತೆಯತ್ತ ಕಲಶ ರವಾನಿಸಲಾಯಿತು. ಸುದೀರ್ಘ 8 ತಾಸುಗಳ ಕಾರ್ಯಾಚರಣೆಯಲ್ಲಿ 22 ಟನ್ ಭಾರದ ಕಲಶವನ್ನು ಸ್ಥಳಾಂತರ ಮಾಡಲು ಜೆಸಿಬಿ, 3 ಕ್ರೈನ್ ಹಾಗೂ ಟ್ರೇಲರ್ ಬಳಕೆಯಾಯಿತು.

43 ಸೆಂಟ್ಸ್ ಜಾಗದಲ್ಲಿದ್ದ ಮಹಾವೀರ ವೃತ್ತದಲ್ಲಿ 2006ರಲ್ಲಿ ಕಲಶ ನಿರ್ಮಾಣವಾಗಿತ್ತು. ಪಂಪ್‌ವೆಲ್ ಮೇಲ್ವೇತುವೆ ನಿರ್ಮಾಣ ಹಿ 2016ರ ಮಾರ್ಚ್ ತಿಂಗಳಲ್ಲಿ ಕಲಶವನ್ನು ಪಂಪ್‌ವೆಲ್ ಹೊರ ಠಾಣೆಯ ಬಳಿಯ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿ ಸಮರ್ಪಕ ನಿರ್ವಹಣೆ ಇಲ್ಲದೆ ಕಳಶ ಮಂಕಾದ ಸ್ಥಿತಿಯಲ್ಲಿತ್ತು. ಕಳೆದ 9 ವರ್ಷಗಳಿಂದ ಮೂಲೆಗುಂಪಾಗಿದ್ದ ಕಳಶವನ್ನು ಸ್ಥಳಾಂತರ ಮ ಜೈನ್ ಸೊಸೈಟಿ ಹಾಗೂ ಜೈನ ಸಮಾಜ ನಿರಂತರವಾಗಿ ಪಾಲಿಕೆಯನ್ನು ಆಗ್ರಹಿಸಿತ್ತು. ಕಳೆದ ಕೆಲವು ತಿಂಗಳ ಹಿಂದೆ ಸ್ಥಳಾಂತರಕ್ಕೆ ಪಾಲಿಹ ನೀಡಿತ್ತು. ಪಾಲಿಕೆಯ ಮಾರ್ಗಸೂಚಿಗಳ ಅನ್ವಯ ಕಲಶ ಮರು ಸ್ಥಾಪನೆ ಕೆಲಸ ಮಾಡಲಾಗಿದೆ.

ಕಲಶ ಶಿಫ್ಟ್ ಕಾರ್ಯಾಚರಣೆ ಹೇಗೆ?

– ರಾತ್ರಿ 8.30: ಪಂಪ್‌ವೆಲ್ ಹೊರಠಾಣೆ ಬಳಿಯಲ್ಲಿದ್ದ ಕಳಶ ತೆರವು ಕಾರ್ಯ ಆರಂಭ

– ರಾತ್ರಿ 11.00 : ಕ್ರೈನ್ ಮೂಲಕ ಟ್ರೇಲರ್‌ಗೆ ತುಂಬಿಸುವ ಕಾರ್ಯ

– ರಾತ್ರಿ 12.00 : ಟ್ರೇಲರ್ ಮೂಲಕ ರವಾನೆ

– ಮುಂಜಾನೆ 4.00: ನಿಯೋಜಿತ ಸ್ಥಳಕ್ಕೆ ತಲುಪಿದ ಕಲಶ

– ಮುಂಜಾನೆ 4.30: ಪಡೀಲ್ ರಸ್ತೆಯ ವೃತ್ತದಲ್ಲಿ ಮರುಸ್ಥಾಪನೆ


Spread the love

Exit mobile version