ಮಂಗಳೂರಿನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ಬ್ರಾಂಡ್ ಪಾಕಶಾಲಾ ಶುಭಾರಂಭ
ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಬ್ಯಾಂಡ್ ಪಾಕಶಾಲಾ ಮೇ 4, 2025 ರಂದು ಕೆಎಸ್ ರಾವ್ ರಸ್ತೆ, ಸಿಟಿ ಸೆಂಟರ್ ಮಾಲ್ ಹತ್ತಿರ ಗಣೇಶ್ ಮಹಲ್‌ನಲ್ಲಿ ತನ್ನ ಮಂಗಳೂರು ಔಟ್‌ಲೆಟ್ ಅನ್ನು ಪ್ರಾರಂಭಿಸುತ್ತಿದೆ. ಇದು ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಕರಾವಳಿಯಲ್ಲಿ ಪಾಕಶಾಲಾದ 4ನೇ ಔಟ್‌ಲೆಟ್ ಆಗಿರುತ್ತದೆ. ಉಳಿದ ಮೂರು ಔಟ್‌ಲೇಟ್‌ಗಳು ಉಡುಪಿ, ಕುಂಭಾಶಿ, ಮುರುಡೇಶ್ವರದಲ್ಲಿವೆ.
ಮಂಗಳೂರಿನ ಹೃದಯಭಾಗದಲ್ಲಿ ಪ್ರಾರಂಭಗೊಳ್ಳಲಿರುವ ಪಾಕಶಾಲಾದ ಹೊಸ ಔಟ್‌ಲೆಟ್‌ನಲ್ಲಿ ಮಂಗಳೂರಿನ ಜನರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ರುಚಿಯಾದ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿಯಲು ವಿಶಾಲವಾದ ಸ್ಥಳಾವಕಾಶವನ್ನು ಒದಗಿಸುವುದರ ಜೊತೆಗೆ ಫ್ಯಾಮಿಲಿ ಸಮ್ಮೀಳನ, ಇವೆಂಟ್ಸ್ ಮತ್ತು ಶುಭಸಮಾರಂಭಗಳನ್ನು ಆಚರಿಸಲು ವಿಶಾಲವಾದ, ಹವಾನಿಯಂತ್ರಿತ ಡೈನಿಂಗ್ ಹಾಲ್ ಮತ್ತು ಸುಸಜ್ಜಿತ ಪಾರ್ಟಿ ಹಾಲ್‌ನ ಸೌಲಭ್ಯವಿದೆ.
1960ರಲ್ಲಿ ಕಾಫಿ ಬಾರ್‌ನಿಂದ ದಕ್ಷಿಣ ಭಾರತದಾದ್ಯಂತ ಪಾಕಶಾಲಾದ ಪ್ರಾರಂಭ
1960ರಲ್ಲಿ ಕೆ.ಎನ್. ವಾಸುದೇವ ಅಡಿಗರ ತಂದೆಯವರಾದ ಕುಂದಾಪುರ-ಶAಕರನಾರಾಯಣದ ಕೆಎನ್ ನಾಗೇಶ್ವರ ಅಡಿಗ ಮತ್ತು ಕೆಎನ್ ಸರಸ್ವತಿ ಇವರು ಬೆಂಗಳೂರಿನಲ್ಲಿ ಬ್ರಾಹ್ಮಣರ ಕಾಫಿ ಬಾರ್ ಅನ್ನು ಸ್ಥಾಪಿಸಿದರು. ಇದು ಸರಳತೆ, ಶುಚಿ-ರುಚಿಗೆ ಹೆಸರುವಾಸಿಯಾಗಿ ತಲೆಮಾರುಗಳವರೆಗೆ ವ್ಯಾಪಿಸಿದ್ದು ಪರಂಪರೆಗೆ ಅಡಿಪಾಯವನ್ನು ಹಾಕಿತು. ಅವರ ಮಗ, ಕುಂದಾಪುರದ ಕೆ.ಎನ್. ವಾಸುದೇವ ಅಡಿಗರು ಬಿಎಂಸ್ ಕಾಲೇಜ್ ಆಫ್ ಇಂಜಿನಿಯರಿAಗ್‌ನ ಪದವೀಧರರು, 1993ರಲ್ಲಿ ವಾಣಿಜ್ಯೋದ್ಯಮ ದೃಷ್ಟಿಕೋನಕ್ಕಾಗಿ ವಾಸುದೇವ ಅಡಿಗಾಸ್ ಬ್ರಾಂಡ್ ಪ್ರಾರಂಭಿಸಿ ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದಾರೆ.
2018 ರಲ್ಲಿ ಶ್ರೀ ವಾಸುದೇವ ಅಡಿಗ ಅವರು ಸಂಪೂರ್ಣವಾಗಿ ಹೊಸ ಮತ್ತು ಸ್ವತಂತ್ರ ಉದ್ಯಮವನ್ನು ಪಾಕಶಾಲಾದ ಮೂಲಕ ಪ್ರಾರಂಭಿಸಿದರು. ಕೇವಲ ಏಳು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶ 30+ ಔಟ್‌ಲೆಟ್‌ಗಳನ್ನು ಪ್ರಾರಂಭಿಸಿದರು. ಪಾಕಶಾಲಾದ ಔಟ್‌ಲೆಟ್‌ಗಳಲ್ಲಿ ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್, ಕಾಂಟಿನೆAಟಲ್ ಮತ್ತು ಚಾಟ್ಸ್ನಾದ್ಯಂತ 325 ಕ್ಕೂ ಹೆಚ್ಚು ಸಸ್ಯಾಹಾರಿ ಭಕ್ಷ್ಯಗಳನ್ನು ಒದಗಿಸುತ್ತದೆ ಮತ್ತು ಎಲ್ಲವನ್ನೂ ಸ್ವಚ್ಛ ಅಡುಗೆಮನೆಗಳಲ್ಲಿ ತಾಜಾವಾಗಿ ತಯಾರಿಸಲಾಗುತ್ತದೆ.
ಮುಂಬರುವ ಔಟ್‌ಲೆಟ್‌ಗಳೊಂದಿಗೆ ಪಾಕಶಾಲಾ ತನ್ನ ತ್ವರಿತ ವಿಸ್ತರಣೆಯನ್ನು ಮುಂದುವರೆಸಿದೆ: ಮೈಸೂರು, ಕನಕಪುರ, ಮಂಡ್ಯ, ದಾವಣಗೆರೆ, ಗ್ರೇಟರ್ ಕೈಲಾಶ್, ನವದೆಹಲಿ, ಚೆಂಡೂರು (ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ). ಪ್ರತಿಯೊಂದು ಹೊಸ ಶಾಖೆಯು ಬ್ರ‍್ಯಾಂಡ್‌ನ ಭರವಸೆಗೆ ಬದ್ಧವಾಗಿದೆ. ಆರೋಗ್ಯಕರ, ಸಾಂಪ್ರದಾಯಿಕ ಸಸ್ಯಾಹಾರಿ ಪಾಕಪದ್ಧತಿಯನ್ನು ಶುದ್ಧ, ಆಧುನಿಕ ಮತ್ತು ಕುಟುಂಬ-ಸ್ನೇಹಿ ವಾತಾವರಣದಲ್ಲಿ ತಲುಪಿಸುತ್ತಿದೆ.