Home Mangalorean News Kannada News ಮಂಗಳೂರಿನಲ್ಲಿ 5 ಕೆಜಿ ಎಫ್‌ಟಿಎಲ್ ಶಿಬಿರ ಆಯೋಜನೆ; ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ

ಮಂಗಳೂರಿನಲ್ಲಿ 5 ಕೆಜಿ ಎಫ್‌ಟಿಎಲ್ ಶಿಬಿರ ಆಯೋಜನೆ; ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ

Spread the love

ಮಂಗಳೂರಿನಲ್ಲಿ 5 ಕೆಜಿ ಎಫ್‌ಟಿಎಲ್ ಶಿಬಿರ ಆಯೋಜನೆ; ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ

ಮಂಗಳೂರು: ಭಾರತ್ ಪೆಟ್ರೋಲಿಯಂ ಸಂಸ್ಥೆಯ ಭಾರತ್‌ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ವತಿಯಿಂದ ಮಂಗಳೂರು ಎಲ್‌ಪಿಜಿ ಪ್ರದೇಶದ ಕದ್ರಿ ಮಾರ್ಕೆಟ್, ಮಲ್ಲಿಕಟ್ಟೆಯಲ್ಲಿ 5 ಕೆಜಿ ಎಫ್‌ಟಿಎಲ್ ಶಿಬಿರವನ್ನು ಆಯೋಜಿಸಲಾಯಿತು.

ವಲಸೆ ಕಾರ್ಮಿಕರು, ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾದ ಈ ಶಿಬಿರಕ್ಕೆ ಹಲವರು ಆಗಮಿಸಿ ಹೊಸ ಯೋಜನೆಗೆ ಆಸಕ್ತಿ ತೋರಿದರು.

ಪ್ರದೇಶ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿಯಾದ ಅನಂತ ರಾವ್ ಹಾಗೂ ವಿತರಕರಾದ ದಿನೇಶ್ ಶೆಟ್ಟಿ ಅವರು 5 ಕೆಜಿ ಎಫ್‌ಟಿಎಲ್ ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನೂ ವಿವರಿಸಿದರು.

ಶಿಬಿರದಲ್ಲಿ ಸ್ಥಳದಲ್ಲೇ ವಿವಿಧ ವಿಚಾರಣೆಗಳನ್ನು ಸ್ವೀಕರಿಸಿ ನೋಂದಣಿ ಪ್ರಕ್ರಿಯೆಯನ್ನೂ ನಡೆಸಲಾಯಿತು.


Spread the love

Exit mobile version