Home Mangalorean News Kannada News ಮಂಗಳೂರಿನಲ್ಲಿ AIKWO ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ

ಮಂಗಳೂರಿನಲ್ಲಿ AIKWO ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ

Spread the love

ಎರಡನೇ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು, ಆದಿತ್ಯವಾರ, ಅಗಸ್ಟ್ 9, 2015ರಂದು, ಕಲಾಂಗಣ್, ಮಂಗಳೂರಿನಲ್ಲಿ, ಅಖಿಲ ಭಾರತ ಕೊಂಕಣಿ ಲೇಖಕ ಸಂಘಟನೆ All India Konkani Writers’ Organisation (AIKWO), ಆಯೋಜಿಸಿತು. ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದಿಂದ ಕೊಂಕಣಿ ಲೇಖಕರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.

 ಸಂಘಟನೆಯ ಅಧ್ಯಕ್ಷರು ಶ್ರೀ ವಿನ್ಸಿ ಕ್ವಾಡ್ರಸ್, ಗೋವಾ, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ, ಡಾ| ಎಡ್ವರ್ಡ್ ನಜ್ರೆತ್ ಸ್ವಾಗತ ಕೋರಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊರವರು ಕೊಂಕಣಿ ಬಾವುಟವಿರುವ ಬೃಹತ್ ಲೇಖನಿಯನ್ನು ಹಾರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಂಕಣಿ ಲೇಖಕರನ್ನು ಒಂದುಗೂಡಿಸುವ, ಯುವಜನರನ್ನು ಕೊಂಕಣಿಯ ಕಡೆಗೆ ಆಕರ್ಷಿಸುವ ಹಾಗೂ ಕೊಂಕಣಿ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೆಲಸ AIKWO ಮಾಡಬೇಕಾಗಿ ಅವರು ಸೂಚಿಸಿದರು.

AIKWO_mangalore 09-08-2015 22-02-55

ಜಾಗತಿಕ್ ಕೊಂಕಣಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎರಿಕ್ ಒಝೇರಿಯೊ ‘ಸಾಹಿತಿ ಹಾಗೂ ಕೊಂಕಣಿ ಭವಿಷ್ಯ’ದ ಕುರಿತು ಮಾತನಾಡಿದರು. ಕೊಂಕಣಿ ಸಾಹಿತಿಗಳು ಕೊಂಕಣಿಗೆ ಭವಿಷ್ಯ ರೂಪಿಸುವ ಕೆಲಸದಲ್ಲಿ ಕೈಜೋಡಿಸಬೇಕು ಹಾಗೂ ಒಂದು ಕೈಯಲ್ಲಿ ಲೇಖನಿ, ಇನ್ನೊಂದು ಕೈಯಲ್ಲಿ ಕೊಂಕಣಿ ಬಾವುಟವನ್ನು ಎತ್ತಿ ಹಿಡಿಯಬೇಕೆಂದು ಹೇಳಿದರು.

 ರಾಕ್ಣೊ ಸಂಪಾದಕರಾದ ವಂ| ಫಾ| ವಲೇರಿಯನ್ ಫೆರ್ನಾಂಡಿಸ್, ಇವರು ‘ಕನ್ನಡ ಲಿಪಿಯಲ್ಲಿ ಕೊಂಕಣಿ ಬರೆಯುವ ಪ್ರಮಾಣ ರೀತಿ’ಯ ಕುರಿತು ವಿಚಾರ ಮಂಡಿಸಿದರು. ಸದಸ್ಯರು ವಿವಿಧ ವಿಷಯಗಳ ಕುರಿತು ತಮಗಿರುವ ಅನುಮಾನಗಳನ್ನು ಬಗೆಹರಿಸಿಕೊಂಡರು.

 ಎರಡನೇ ವಿಚಾರ ಮಂಡನೆಯಲ್ಲಿ, ಶ್ರೀ ಜುಜೆ ಸಾಲ್ವಾದೊರ್ ಫೆರ್ನಾಂಡಿಸ್, ಗೋವಾ, ಇವರು ‘ಭವಿಷ್ಯದ ಕೊಂಕಣಿ ಲಿಪಿ – ರೋಮಿ’ಯ ಕುರಿತು ಮಾತನಾಡಿದರು. ಗೋವಾದಲ್ಲಿ ರೋಮಿ ಲಿಪಿಯಲ್ಲಿರುವ ಸಾಹಿತ್ಯ ಹಾಗೂ ಸಂಬಂಧಪಟ್ಟ ವಿಷಯಗಳ ವಿವರ ನೀಡಿದರು.

 ಸಮ್ಮೇಳನದ ಕಾರ್ಯನಿರ್ವಹಣೆ ಮಾಡಿದ, AIKWO ಸಮಿತಿ ಸದಸ್ಯೆ, ಶ್ರೀಮತಿ ಐರಿನ್ ರೆಬೆಲ್ಲೊ, ವಂದನಾರ್ಪಣೆ ಮಾಡಿದರು.

ಮಧ್ಯಾಹ್ನ, AIKWO ಎರಡನೇ ಮಹಾಸಭೆ ಸೇರಿತು. ಕಾರ್ಯದರ್ಶಿ, ಡಾ| ಎಡ್ವರ್ಡ್ ನಜ್ರೆತ್ ವಾರ್ಷಿಕ ವರದಿ ಮಂಡಿಸಿದರು ಹಾಗೂ ಖಜಾಂಚಿ ಶ್ರೀ ರಿಚರ್ಡ್ ಮೊರಾಸ್ ಇವರು ವಾರ್ಷಿಕ ಲೆಕ್ಕಾಪಟ್ಟಿಯನ್ನು ಓದಿದರು. ಮಹಾಸಭೆಯಿಂದ ಮಂಜೂರಾತಿ ಪಡೆದ ನಂತರ ವಿಚಾರ ವಿನಿಮಯ ನಡೆಸಿ, ಬರುವ ವರ್ಷದಲ್ಲಿ ಗೋವಾ, ಕರ್ನಾಟಕ, ಮಹಾರಾಷ್ಟ ಹಾಗೂ ಕೇರಳಾದ ವಿವಿಧ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ಆಯೋಜಿಸುವ ನಿರ್ಧಾರ ತೆಗೆದುಕೊಂಡರು. AIKWO ಅಧ್ಯಕ್ಷರಾದ ಶ್ರೀ ವಿನ್ಸಿ ಕ್ವಾಡ್ರಸ್, ಗೋವಾ, ಇವರ ಅಧ್ಯಕ್ಷತೆಯಲ್ಲಿ ಈ ಮಹಾಸಭೆ ನಡೆಯಿತು.


Spread the love

Exit mobile version