Home Mangalorean News Kannada News ಮಂಗಳೂರು/ಉಡುಪಿ: ಗ್ರಾಪಂ ಚುನಾವಣೆ: ದ.ಕ. 74 ಶೇ., ಉಡುಪಿ ಶೇ.71.65 ಮತದಾನ

ಮಂಗಳೂರು/ಉಡುಪಿ: ಗ್ರಾಪಂ ಚುನಾವಣೆ: ದ.ಕ. 74 ಶೇ., ಉಡುಪಿ ಶೇ.71.65 ಮತದಾನ

Spread the love

ಮಂಗಳೂರು/ಉಡುಪಿ: ಜಿಲ್ಲೆಯ 155 ಗ್ರಾಪಂಗಳಲ್ಲಿ 148 ಗ್ರಾಪಂಗಳಿಗೆ ಇಂದು ನಡೆದ ಶಾಂತಿಯುತ ಮತದಾನದಲ್ಲಿ ಶೇ.71.65ರಷ್ಟು ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ 7 ಗ್ರಾಪಂಗಳಿಗೆ ಈ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು.
ಉಡುಪಿ ತಾಲೂಕಿನ 59 ಗ್ರಾಪಂಗಳಲ್ಲಿ 58ಕ್ಕೆ ನಡೆದ ಚುನಾವಣೆಯಲ್ಲಿ ಶೇ.70.55ರಷ್ಟು, ಕುಂದಾಪುರ ತಾಲೂಕಿನ 62ರಲ್ಲಿ 58 ಗ್ರಾಪಂಗಳಿಗೆ ಶೇ.71.19ರಷ್ಟು ಹಾಗೂ ಕಾರ್ಕಳ ತಾಲೂಕಿನ 34ರಲ್ಲಿ 32 ಗ್ರಾಪಂಗಳಿಗೆ ಶೇ.74.93ರಷ್ಟು ಮತ ದಾನವಾಗಿರುವ ಬಗ್ಗೆ ವರದಿಗಳು ತಿಳಿಸಿವೆ.
ಒಟ್ಟಾರೆಯಾಗಿ ಇಡೀ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿಯುತ ಮತದಾನ ನಡೆದಿದೆ. ಉಡುಪಿ ಹಾಗೂ ಕಾಪುವಿನ ಒಂದೆರಡು ಮತಗಟ್ಟೆಗಳಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೂ, ವಾತಾವರಣ ಬಿಸಿಯೇರುವ ಮೊದಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಯನ್ನು ತಿಳಿಗೊಳಿಸಿದರು.

gp-election (4)
ಬೆಳಗಿನಿಂದಲೇ ಸುರಿಯತೊಡಗಿದ ಮಳೆ, ಸಿಡಿಲು, ಗುಡುಗಿನಿಂದ ಮತದಾನಕ್ಕೆ ಆಗಾಗ ಅಡ್ಡಿ ಯುಂಟಾದರೂ, ಜನರು ಉತ್ಸಾಹದಿಂದಲೇ ಮತ ದಾನದಲ್ಲಿ ಪಾಲ್ಗೊಂಡರು. ಕಾರ್ಕಳ ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ನಕ್ಸಲ್ ಪ್ರಭಾವಿತ ಪ್ರದೇ ಶಗಳಲ್ಲಿ ಜನರು ಭಾರೀ ಉತ್ಸಾಹ ದಿಂದ ಮತದಾನ ಮಾಡಿರುವುದು ಅಲ್ಲಿ ಆದ ಮತ ದಾನದಿಂದ ಸ್ಪಷ್ಟ ವಾಗಿದೆ. ಜಿಲ್ಲೆಯಲ್ಲಿ ಒಟ್ಟು 54 ನಕ್ಸಲ್ ಬಾಧಿತ ಮತಗಟ್ಟೆಗಳಿದ್ದು ಅಲ್ಲಿ ಅಪರಾಹ್ನ 1ರ ಸುಮಾರಿಗೆ ಶೇ.60ರಷ್ಟು ಮತದಾನವಾಗಿತ್ತು. ಜಿಲ್ಲೆಯಲ್ಲಿರುವ ಒಟ್ಟು 907 ಮತಗಟ್ಟೆಯಲ್ಲಿ 131 ಸೂಕ್ಷ್ಮ ಹಾಗೂ 59 ಅತೀಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಇವುಗಳಲ್ಲಿ 54ಮತಗಟ್ಟೆಗಳು ನಕ್ಸಲ್ ಬಾಧಿತ ಪ್ರದೇಶಗಳಲ್ಲಿವೆ. ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕರ್ನಾಟಕ, ಕೇರಳ ಪೊಲೀಸ್ ಪಡೆ, ಹೋಮ್ ಗಾರ್ಡ್, ಕರಾವಳಿ ಕಾವಲು ಪಡೆಯ ಒಟ್ಟು 1376 ಪೊಲೀಸರನ್ನು ನಿಯೋಜಿಸಲಾಗಿತ್ತು.
ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 5ರವರೆಗೆ ನಿರಾತಂಕವಾಗಿ ನಡೆಯಿತು. ಸುಳ್ಯ-77.94 ಶೇ., ಪುತ್ತೂರು-75.43 ಶೇ., ಬಂಟ್ವಾಳ-73.40 ಶೇ., ಬೆಳ್ತಂಗಡಿ- 72.89 ಶೇ., ಮಂಗಳೂರು-68.73 ಶೇ.
ಮಂಗಳೂರು, ಮೇ 29: ದ.ಕ. ಜಿಲ್ಲೆಯ 277 ಗ್ರಾಪಂಗಳ 1,030 ವಾರ್ಡ್‌ಗಳಲ್ಲಿ 3,288 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.74 ಶೇ. ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ 77.94 ಶೇ., ಪುತ್ತೂರು ತಾಲೂಕು- 75.43 ಶೇ., ಬಂಟ್ವಾಳ- 73.40 ಶೇ., ಬೆಳ್ತಂಗಡಿ- 72.89 ಶೇ. ಹಾಗೂ ಮಂಗಳೂರು ತಾಲೂಕಿನಲ್ಲಿ 68.73 ಶೇ. ಅಂದಾಜು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಕೆಲವು ಕಡೆ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಕಡೆಯೂ ಮತದಾನ ಶಾಂತಿಯುತವಾಗಿ ನಡೆದಿತ್ತು. 3,397 ಸ್ಥಾನಗಳ ಪೈಕಿ 109 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ, 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಉಳಿದ 3,288 ಸ್ಥಾನಗಳಿಗೆ 1,212 ಮತಗಟ್ಟೆಗಳಲ್ಲಿ ಇಂದು ಚುನಾವಣೆ ನಡೆಯಿತು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತ ಗಟ್ಟೆಗಳಲ್ಲಿ ಸಕಲ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಾದರೂ ಕೂಡ ಸಣ್ಣ ಪುಟ್ಟ ಹೊಯ್‌ಕೈ, ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. ಜಿಲ್ಲೆಯ ಒಟ್ಟು 10,16,024 ಮತ ದಾರರು 7,619 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಜೂ.5ರಂದು ಫಲಿತಾಂಶ ಪ್ರಕಟವಾಗುವು ದರೊಂದಿಗೆ ‘ಹಳ್ಳಿ ರಾಜಕೀಯ’ಕ್ಕೆ ಸಂಪೂರ್ಣ ತೆರೆ ಬೀಳಲಿದೆ.


Spread the love

Exit mobile version