Home Mangalorean News Kannada News ಮಂಗಳೂರು:  ಆರೋಗ್ಯ ಸಚಿವ ಖಾದರ್ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು:  ಆರೋಗ್ಯ ಸಚಿವ ಖಾದರ್ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

Spread the love

ಮಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ 46 ನೇ ಜನ್ಮದಿನದ ಪ್ರಯುಕ್ತ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಸೋಮವಾರ ಆಯೋಜಿಸಲಾಗಿತ್ತು.

01-minister-khader-blood-donation-camp-20151012

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ ಶರತ್ ಅವರು ಯು ಟಿ ಖಾದರ್ ಅವರ ಜನ್ಮದಿನಂದು ರಕ್ತದಾನ ಶಿಬಿರವನ್ನು ಆಯೋಜಿಸಲು ವೈದ್ಯಕೀಯ ವಿದ್ಯಾರ್ಥಿಗಳು ನಿರ್ಧರಿಸಿದ್ದು, ಇದು ಇತರ ಯುವಕರಿಗೆ ಮಾರ್ಗದರ್ಶನವಾಗಲಿ ಎಂಬ ಉದ್ದೇಶವಾಗಿದೆ. ಯುಟಿ ಖಾದರ್ ಒರ್ವ ಸ್ನೇಹಮಯಿ ರಾಜಕಾರಣಿಯಾಗಿದ್ದು, ಅವರ ಸಹಕಾರದ ಮನೋಭಾವ ಇತರರಿಗೆ ಮಾರ್ಗದರ್ಶನವಾಗಿ ಹೆಚ್ಚು ಹೆಚ್ಚು ಯುವಕರು ರಕ್ತದಾನ ನಡೆಸಲು ಮುಂದಾಗಲಿ ಎಂದು ಹಾರೈಸಿದರು. ಅಲ್ಲದೆ ಕಿಡ್ನಿ ಹಾಗೂ ಕ್ಯಾನ್ಸರ್ ಪೀಡರಿಗಾಗಿ ಸೇವೆ ನೀಡುತ್ತಿರುವ ಜಿ ಶಂಕರ್ ಟ್ರಸ್ಟಿನ ಶ್ಯಾಮಿಲಿ ಅವರ ಸೇವೆಯನ್ನು ಪ್ರಶಂಸಿದರು.

ಯು ಟಿ ಖಾದರ್ ಮಾತನಾಡಿ ದೇವರು ನಮಗೆ ನೀಡಿರುವ ಜೀವ ಇತರರಿಗಾಗಿ ಬದಕಲು, ನಾವು ರಕ್ತದಾನ ಮಾಡುವ ಮೂಲಕ ಇತರರಿಗೆ ಬಾಳು ನೀಡುವ ಕೆಲಸ ಮಾಡಲು ಸಾಧ್ಯವಿದೆ. ನನ್ನ ಜೀವನದಲ್ಲಿ ಎಂದೂ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ ಆದರೆ ವೈದ್ಯಕೀಯ ವಿದ್ಯಾರ್ಥಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಆಚರಿಸಿಕೊಳ್ಳೂತ್ತಿದ್ದು, ನನ್ನ ಉದ್ದೇಶ ಯಾವುದೇ ವ್ಯಕ್ತಿ ರಕ್ತದ ಕೊರತೆಯಿಂದ ಸಾವನಪ್ಪಬಾರದು ಇದಕ್ಕಾಗಿ ಸಮಾಜದ ಪ್ರತಿಯೊಬ್ಬರು ರಕ್ತದಾನದ ಮಹತ್ವವನ್ನು ಅರಿಯಬೇಕು ಎಂದರು. ಕಳೆದ 10-15 ವರುಷಗಳಿಂದ ನಾನು ಸತತವಾಗಿ ರಕ್ತದಾನ ಮಾಡುತ್ತಿದ್ದು ಈ ವರೆಗೆ ಸುಮಾರು 60 ಬಾರಿ ರಕ್ತದಾನ ಮಾಡಿದ್ದೇನೆ ಎಂದರು. ಹೆಚ್ಚಿನ ವ್ಯಕ್ತಿಗಳು ರಕ್ತದಾನ ಮಾಡಲು ಹೆದರುತ್ತಿದ್ದು, ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದರು.

ಶ್ಯಾಮಿಲಿ ಜಿ ಶಂಕರ್, ಡಾ ವಾಮದೇವ ಮತ್ತು ಗೋಪಾಲ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕ್ಯಾನ್ಸರ್ ಪೀಡಿತರಿಗೆ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡಮಾಡಲಾದ ವೈದ್ಯಕೀಯ ನೆರವನ್ನು ಖಾದರ್ ಹಸ್ತಾಂತರಿಸಿದರು. ಮಹಮ್ಮದ್ ಸುಹೆಲ್, ರುಬಿನಾ ಡಿಸೋಜಾ, ಡಾ ರೋಹಿರಾ ಶೆಟ್ಟಿ, ಡಿ ಎಚ್ ಒ ಡಾ ರಾಮಕೃಷ್ಣ, ಮೈನಾ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version