Home Mangalorean News Kannada News ಮಂಗಳೂರು ಆರ್.ಟಿಓ. ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ

ಮಂಗಳೂರು ಆರ್.ಟಿಓ. ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ

Spread the love

ಮಂಗಳೂರು ಆರ್.ಟಿಓ. ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ

ಮಂಗಳೂರು : ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು ಕಛೇರಿಯಲ್ಲಿ ಲೈಸೆನ್ಸ್‍ಗೆ ಸಂಬಂಧಿಸಿದ ಕಛೇರಿ ಕೆಲಸಗಳನ್ನು ಮಾರ್ಚ್ 22ರಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 29ರಿಂದ ಪ್ರಾಯೋಗಿಕವಾಗಿ ಚಾಲನಾ ಪತ್ರದ ಸೇವೆಗಳು ಪ್ರಾರಂಭವಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಜೂನ್ 1 ರಿಂದ ಸೇವೆಗಳು ಲಭ್ಯವಾಗಲಿದೆ.

ಅವುಗಳ ವಿವರ ಈ ಕೆಳಗಿನಂತಿರುತ್ತದೆ.

  1.  ಕಲಿಕಾ ಲೈಸೆನ್ಸ್ ನೀಡುವಿಕೆ. (ಎಲ್.ಎಲ್.ಪರೀಕ್ಷೆ)
  2.  ಚಾಲನಾ ಅನುಜ್ಞಾ ಪತ್ರ ನೀಡುವಿಕೆ.(ಡಿ.ಎಲ್. ಪರೀಕ್ಷೆ)
  3.  ಚಾಲನಾ ಅನುಜ್ಞಾ ಪತ್ರ ನವೀಕರಣ
  4.  ವಿಳಾಸ ಬದಲಾವಣೆ.
  5. ನಿರ್ವಾಹಕ ಲೈಸೆನ್ಸ್ ನೀಡುವಿಕೆ/ ನವೀಕರಣ
  6. ಇಂಟರ್ ನ್ಯಾಶನಲ್ ಡ್ರೈವಿಂಗ್ ಹಾಗೂ ಇತರ ಸೇವೆಗಳು.

ಕೋವಿಡ್-19 ರ ಜೊತೆ ಸೇರಿ ಬದುಕಬೇಕಾಗಿರುವುದರಿಂದ ಕರೋನಾ ಸೊಂಕೀತರಿಂದ ದೂರವಾಗಿರಲು ಸಾಮಾಜಿಕ ಅಂತರ ಹಾಗೂ ಜನದಟ್ಟಣೆ ಕಾಪಾಡಲು, ನಮ್ಮ-ನಿಮ್ಮ ಆರೋಗ್ಯ ಕಾಪಾಡಲು, ಪ್ರಾದೇಶಿಕ ಸಾರಿಗೆ ಕಛೇರಿಯ ಲೈಸೆನ್ಸ್ ವಿಭಾಗದ ಸೇವೆಗಳನ್ನು 50% ಕಡಿತ ಮಾಡಲಾಗಿದೆ. ಪ್ರತಿ ದಿನ 50 ಕಲಿಕಾ ಲೈಸೆನ್ಸ್ ನೀಡುವಿಕೆ. (ಎಲ್.ಎಲ್.ಪರೀಕ್ಷೆ), 50 ಚಾಲನಾ ಅನುಜ್ಞಾ ಪತ್ರ ನೀಡುವಿಕೆ.(ಡಿ.ಎಲ್. ಪರೀಕ್ಷೆ) 50, ಚಾಲನಾ ಅನುಜ್ಞಾ ಪತ್ರ ನವೀಕರಣ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.

ಸಾರ್ವಜನಿಕರು, ಅರ್ಜಿಯೊಂದಿಗೆ ಮಾಸ್ಕ್ ಧರಿಸಿ ಟ್ರರ್ಮಿನಲ್ ಸ್ಕ್ಯಾನಿಂಗ್ ಆದ ಮೇಲೆ ಕಛೇರಿ ಒಳಗಡೆ ಪ್ರವೇಶ ನೀಡಲಾಗುವುದು. ಅರ್ಜಿದಾರರ ಜೊತೆ ಬೇರೆ ಯಾರಿಗೂ ಪ್ರವೇಶವಿರುವುದಿಲ್ಲ. ಜೂನ್-30 ರವರೆಗೆ ಚಾಲನಾ ಅನುಜ್ಞಾ ಪತ್ರ ಅವಧಿ ಚಾಲ್ತಿ ಇರುವುದರಿಂದ ಸಾರ್ವಜನಿಕರು ಚಾಲನಾ ಅನುಜ್ಞಾ ಪತ್ರದ ಅವಧಿ ಮುಗಿದಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಹೊಸ ಕಲಿಕಾ ಲೈಸೆನ್ಸ್ ಪರೀಕ್ಷೆಗಳ ಸ್ಲಾಟ್ ಜೂನ್-15 ನಂತರ ನೀಡಲಾಗುವುದು. ಹಳೆ ಸ್ಲಾಟ್ ದಿನಾಂಕದ ಅಭ್ಯರ್ಥಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಕಛೇರಿ ಸಿಬ್ಬಂದಿಗಳ ಜೊತೆ ಸಹಕಾರ ನೀಡಬೇಕೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಆರ್.ಎಂ.ವರ್ಣೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version