ಮಂಗಳೂರು| ಎಸ್.ಐ.ಆರ್: 2,53,198 ಫಾರ್ಮ್ ಡಿಜಿಟೈಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 13 ರವರೆಗೆ 17,80,447 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 2,53,198 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ: ಬೆಳ್ತಂಗಡಿ-29792, ಮೂಡಬಿದ್ರೆ-28468, ಮಂಗಳೂರು ನಗರ ಉತ್ತರ-27412, ಮಂಗಳೂರು ನಗರ ದಕ್ಷಿಣ-34217, ಮಂಗಳೂರು-43539, ಬಂಟ್ವಾಳ-27943, ಪುತ್ತೂರು-24796, ಸುಳ್ಯ-37031.
