ಮಂಗಳೂರು: ಒರಿಸ್ಸಾದಲ್ಲಿ ಸ್ಪೀಕರ್ಗಳ ಸಭೆ: ಯು.ಟಿ.ಖಾದರ್ ಭಾಗಿ
ಮಂಗಳೂರು: ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ರಚಿಸಲಾದ ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿಯ ಸಭೆಯು ಮಂಗಳವಾರ ಒಡಿಸಾ ರಾಜ್ಯದ ಪುರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಒಡಿಸಾ ವಿಧಾನಸಭೆ ಸಭಾಧ್ಯಕ್ಷೆ ಸುರಮ ಪಾದಿ, ನಾಗಲ್ಯಾಂಡ್ ವಿಧಾನಸಭೆ ಸಭಾಧ್ಯಕ್ಷ ಷರಿಂಗೈನ್ ಲಾಂಗ್ಕುಮೆರ್ ಉಪಸ್ಥಿತರಿದ್ದರು.
