Home Mangalorean News Kannada News ಮಂಗಳೂರು: ಕೋಸ್ಟಲ್ ಟೂರಿಸಂ ಪ್ರಮೋಶನ್ ಕೌನ್ಸಿಲ್ (ಸಿ.ಟಿ.ಪಿ.ಸಿ) ಅಧ್ಯಕ್ಷರಾಗಿ ಸಮ್ಮಿಲನ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ಭಗವಾನ್...

ಮಂಗಳೂರು: ಕೋಸ್ಟಲ್ ಟೂರಿಸಂ ಪ್ರಮೋಶನ್ ಕೌನ್ಸಿಲ್ (ಸಿ.ಟಿ.ಪಿ.ಸಿ) ಅಧ್ಯಕ್ಷರಾಗಿ ಸಮ್ಮಿಲನ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ಭಗವಾನ್ ದಾಸ್ ಕೊಣಾಜೆ ಆಯ್ಕೆ

Spread the love

ಮಂಗಳೂರು: ಕೋಸ್ಟಲ್ ಟೂರಿಸಂ ಪ್ರಮೋಶನ್ ಕೌನ್ಸಿಲ್ (ಸಿ.ಟಿ.ಪಿ.ಸಿ) ಸಂಸ್ಥೆ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿದ್ದು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳು ಇದರ ವ್ಯಾಪ್ತಿಯಾಗಿದೆ.

ದಿನಾಂಕ 27/8/2015ರಂದು ಮಂಗಳೂರು ನಗರದ ವುಡ್‍ಲ್ಯಾಂಡ್ ಹೊಟೇಲ್‍ನಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬೆಳುವಾಯಿ ಬಟರ್‍ಫ್ಲೈ ಪಾರ್ಕಿನ ಸಂಸ್ಥಾಪಕ ಸಮ್ಮಿಲನ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಟೂರಿಸಂ ಕನ್ಸಲ್ಟಂಟ್ ಭಗವಾನ್ ದಾಸ್ ಕೊಣಾಜೆ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ಛಾಯಾಗ್ರಾಹಕ ಶ್ರೀಕಾಂತ್, ಉಪಾಧ್ಯಕ್ಷರಾಗಿ ನಟರಾಜ್ ಎಮ್.ಎಸ್, ರಾಘವೇಂದ್ರ ಶೆಟ್ಟಿ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಸಾಲ್ಯಾನ್, ಜೊತೆ ಕಾರ್ಯದರ್ಶಿಯಾಗಿ ಶ್ರೀರಾಜ್ ಸುಳ್ಯ, ದೇವಿಪ್ರಸಾದ್ ಎನ್. ಜಿ ಉಡುಪಿ, ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನವನೀತ್ ಡಿ ಹಿಂಗಾಣಿ, ದೇವಿ ಪ್ರಸಾದ್ ತುಂಬತ್ತಾಜೆ ಸುಳ್ಯ, ರಕ್ಷಿತ್ ರಾವ್, ಜಗನ್ನಾಥ್ ಶಿರ್ಲಾಲ್, ಪ್ರಶಾಂತ್ ಕಾವೂರು, ರಾಜೇಶ್ ಪುತ್ತೂರು, ನವೀನ್ ಕುಮಾರ್, ಯತೀಶ್ ಬಿ.ಸಿ.ರೋಡ್, ಹರ್ಷಿತ್ ಸ್ವರ್ಗ ಪುತ್ತೂರು, ಯತಿರಾಜ್ ಪದವಿನಂಗಡಿ, ಮನೋಜ್ ಕುಮಾರ್ ಶೆಟ್ಟಿ ಮಣಿಪಾಲ, ಮಣಿರಾಜ್ ಪೂಜಾರಿ ಕಾರ್ಕಳ ಇವರನ್ನು ಆಯ್ಕೆಮಾಡಲಾಗಿದೆ.


Spread the love

Exit mobile version