Home Mangalorean News Kannada News ಮಂಗಳೂರು : ಜಿಲ್ಲಾ ಗೃಹರಕ್ಷಕದಳ  ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ

ಮಂಗಳೂರು : ಜಿಲ್ಲಾ ಗೃಹರಕ್ಷಕದಳ  ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ

Spread the love

ಮಂಗಳೂರು : ಜಿಲ್ಲಾ ಗೃಹರಕ್ಷಕದಳ ವತಿಯಿಂದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ-2015 ರ ಸಮಾರೋಪ ಜಿಲ್ಲಾ  ಗೃಹರಕ್ಷಕದಳದ ಕಛೇರಿ ಆವರಣ ಮೇರಿಹಿಲ್, ಇಲ್ಲಿ ಬುಧವಾರ ಜರುಗಿತು.

ಮುಖ್ಯ ಅಗ್ನಿಶಾಮಕ ಅಧಿಕಾರಿ ಎನ್ ಶಶಿಧರ ಅವರು ಕ್ರೀಡೆಯಲ್ಲಿ ವಿಜೇತ ಗೃಹರಕ್ಷಕ ಗೃಹರಕ್ಷಕಿಯರಿಗೆ ಪದಕ ಪ್ರದಾನ ಮಾಡಿದರು. ಅಬಕಾರಿ ಉಪ ಆಯುಕ್ತ  ಮಂಜುನಾಥ ಅವರು ಮಾತನಾಡುತ್ತಾ, ಗೃಹರಕ್ಷಕರು ಉತ್ತಮ ದೈಹಿಕ ಸಾಮಥ್ರ್ಯ ಹೊಂದಬೇಕಾದ ಅನಿವಾರ್ಯತೆ ಇದ್ದು, ಇಂತಹ ಕ್ರೀಡಾಕೂಟಗಳು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹರಕ್ಷಕದಳ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳು ಸರ್ವೇಸಾಮಾನ್ಯವಾಗಿದೆ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಂಡು ಕ್ರೀಡೆಯು ದೈನಂದಿನ ಚಟುವಟಿಕೆಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಮಾಹಿತಿ ನೀಡಿದರು.

ಡೆಪ್ಯೂಟಿ ಕಮಾಂಡೆಂಟ್  ರಮೇಶ್ ಸ್ವಾಗತಿಸಿ,  ಸೆಕೆಂಡ್ ಇನ್ ಕಮಾಂಡ್ ಮಹಮ್ಮದ್ ಇಸ್ಮಾಯಿಲ್ ವಂದಿಸಿದರು. ಉಷಾ ನಿರೂಪಿಸಿದರು.


Spread the love

Exit mobile version