Home Mangalorean News Kannada News ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ಮಧ್ಯೆ ಹೊಡೆದಾಟ

ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ಮಧ್ಯೆ ಹೊಡೆದಾಟ

Spread the love

ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ಮಧ್ಯೆ ಹೊಡೆದಾಟ

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಮಧ್ಯಾಹ್ನ ಕೈದಿಗಳ ಮಧ್ಯೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ.

ಅಡುಗೆ ಮಾಡುತ್ತಿದ್ದ ಕೈದಿ ಅಕ್ಷಿತ್ ಎಂಬಾತನಿಗೆ ಅಬ್ದುಲ್ ರಹ್ಮಾನ್ ಯಾನೆ ಮುನ್ನಿ ಯಾನೆ ಮುನೀರ್, ಉಮರ್ ಶಿಹಾಬ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದು ಬಂದಿದೆ.

ಮಾಹಿತಿ ಪಡೆದ ಬರ್ಕೆ ಪೊಲೀಸರು ಜೈಲಿಗೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು ಎಂದು ಮೂಲಗಳು ತಿಳಿಸಿವೆ.


Spread the love

Exit mobile version