Home Mangalorean News Kannada News ಮಂಗಳೂರು: ಧಾರಾಕಾರ ಮಳೆಗೆ ಬೃಹತ್ ಮರ ಧರೆಗುರುಳಿ ಮನೆಗೆ ಹಾನಿ

ಮಂಗಳೂರು: ಧಾರಾಕಾರ ಮಳೆಗೆ ಬೃಹತ್ ಮರ ಧರೆಗುರುಳಿ ಮನೆಗೆ ಹಾನಿ

Spread the love

ಮಂಗಳೂರು: ಧಾರಾಕಾರ ಮಳೆಗೆ ಬೃಹತ್ ಮರ ಧರೆಗುರುಳಿ ಮನೆಗೆ ಹಾನಿ

ಮಂಗಳೂರು: ನಗರದಲ್ಲಿ ತಡರಾತ್ರಿ ಗುಡುಗು-ಸಿಡಿಲು ಸಮೇತ ಸುರಿದ ಭಾರೀ ಮಳೆಯಿಂದಾಗಿ ಬೃಹತ್ ವೃಕ್ಷವೊಂದು ಧರೆಗುರುಳಿ ಮನೆಗೆ ಹಾನಿ ಉಂಟಾದ ಘಟನೆ ನಡೆದಿದೆ.

ಮಂಗಳೂರಿನ ಬಸವನಗುಡಿ ಮಠದ ಸಮೀಪ ಈ ಘಟನೆ ಸಂಭವಿಸಿದ್ದು, ವರದರಾಜ್ ಶೇಟ್ ಅವರಿಗೆ ಸೇರಿದ ಹೆಂಚಿನ ಮನೆ ಮೇಲೆ ಮರದ ದೊಡ್ಡ ಭಾಗ ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದೆ.

ಘಟನೆಯ ವೇಳೆ ಮನೆಯೊಳಗೆ 4 ತಿಂಗಳ ಮಗು ಹಾಗೂ 80 ವರ್ಷದ ಇಬ್ಬರು ವೃದ್ಧರು ಸೇರಿ ಐದಾರು ಮಂದಿ ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸ್ಥಳೀಯರು ಹಾಗೂ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.


Spread the love

Exit mobile version