ಮಂಗಳೂರು: ಕಲಾ ಪ್ರದರ್ಶನ ನೀಡುವ ಸಂಘಟನೆಗಳಲ್ಲಿ ಕುಟುಂಬದ ವಾತಾವರಣ ಸೃಷ್ಟಿಸಿ, ತಂಡವನ್ನೇ ಒಂದು ಕುಟುಂಬವನ್ನಾಗಿ ಪರಿವರ್ತಿಸಿಕೊಂಡು, ನಾಡಿನಖ್ಯಾತ ಕಲಾ ತಂಡವಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳನ್ನು ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ ‘ನಂದಗೋಕುಲ’ ಹೊಂದಿದೆ ಎಂದು ಖ್ಯಾತ ನೃತ್ಯಕಲಾವಿದೆ-ಗುರು ವಿದ್ಯಾಶ್ರೀ ರಾಧಾಕೃಷ್ಣ ಹೇಳಿದರು.
ಅವರು ನಗರದಲ್ಲಿ ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ ನಂದಗೋಕುಲ ಆಯೋಜಿಸಿದ್ದ ಗಾನ ನಾಟ್ಯ ಪಯಣವನ್ನು ಉದ್ಘಾಟಿಸಿ ಮಾತಾಡುತ್ತಾ, ಅಲ್ಪ ಅವಧಿಯಲ್ಲಿ ತಂಡದ ಸಾಧನೆ ಹಾಗೂ ಕಲಾ ಕಾಳಜಿ ಸ್ತುತ್ಯರ್ಹ ಎಂದೂ ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ ಹರಿಕೃಷ್ಣ ಪುನರೂರು ಅವರು, ಶಿಕ್ಷಣ, ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಯಲ್ಲಿ ಅರೆಹೊಳೆ ಪ್ರತಿಷ್ಠಾನ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿ, ನಂದಗೋಕುಲ ರಾಷ್ಟ್ರ ಮಟ್ಟದ ಕಲಾ ತಂಡವಾಗಿ ಗುರುತಿಸಿಕೊಳ್ಳಲಿ ಎಂದು ಹಾರೈಸಿದರು.
ಪ್ರತಿಷ್ಠಾನ ಈ ವರ್ಷದಿಂದ ನೀಡುತ್ತಿರುವ ನಂದಗೋಕುಲ ಕಲಾ ಪ್ರಶಸ್ತಿಯನ್ನು ನೃತ್ಯಗುರು ಚಂದ್ರಶೇಖರ ನಾವುಡರಿಗೆ ಲಯನ್ಸ್‍ಜಿಲ್ಲಾ ಮಾಜಿ ಗವರ್ನರ್ ಹೆಚ್‍ಎಸ್ ಮಂಜುನಾಥ ಮೂರ್ತಿ ಪ್ರದಾನಿಸಿ, ಬಾಲಕೃಷ್ಣ (ಬಾಕೃ), ಮಂಜುಳಾ ಸುಬ್ರಹ್ಮಣ್ಯ, ಕೆ ಭುವನಾಭಿರಾಮ ಉಡುಪ ಹಾಗೂ ತುಕಾರಾಮ ಪೂಜಾರಿಯವರನ್ನು ಶಿಕ್ಷಣ, ಕಲೆ, ಸಾಹಿತ್ಯ ಹಾಗೂ ಸಂಸ್ಕøತಿ ಕ್ಷೇತ್ರದ ಸಾಧನೆಗಾಗಿ ಸಂಮಾನಿಸಿದರು.
ಪ್ರಶಾಂತ್ ಪೈ, ರತ್ನಾಕರ್, ಸುಬ್ರಾಯಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೋಹನ್ ಕೊಪ್ಪಳ, ದುರ್ಗಾಮೆನನ್ ಹಾಗೂ ಇತರರು ಉಪಸ್ಥಿತರಿದ್ದರು. ಅರೆಹೊಳೆ ಪ್ರತಿಷ್ಠಾನದ ಉಪಾಧ್ಯಕ್ಷೆ ಗೀತಾರಾವ್ ಸ್ವಾಗತಿಸಿ, ನಂದಗೋಕುಲ ತಂಡದ ಶ್ವೇತಾ ಅರೆಹೊಳೆ ಹಾಗೂ ಗಾಯಕಿ ಪುಷ್ಪಲತಾ ಕಾರಂತ್ ಗುರುವಂದನೆ ನಡೆಸಿದರು.
ನಂದಗೋಕುಲದ ಅವಳಿ ಸಹೋದರಿ ಕಲಾವಿದೆಯರಾದ ಹರ್ಷಿತಾಎಸ್ ವಿ ಮತ್ತು ಹಶ್ಮಿತಾ ಎಸ್ ವಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಗಾನ ನೃತ್ಯ ಅಕಾಡೆಮಿ, ತುಳಸಿ ಹೆಗಡೆ ಹಾಗೂ ನಂದಗೋಕುಲ ತಂಡಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದುವು.