Home Mangalorean News Kannada News ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ

ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ

Spread the love

ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಶಾಸಕರು, ಜೆಪ್ಪು ವಾರ್ಡಿನ ರೈಲ್ವೇ ಗೇಟಿನಿಂದ ಕನಕರಬೆಟ್ಟು ರಸ್ತೆಗೆ 7 ಲಕ್ಷದ ಕಾಂಕ್ರೀಟೀಕರಣದ ಕಾಮಗಾರಿ, ಅಳಪೆ ಉತ್ತರ ವಾರ್ಡಿನಲ್ಲಿ ತೋಡು ದುರಸ್ತಿ ಕಾಮಗಾರಿಗೆ 7 ಲಕ್ಷ, ಕೊಡಿಯಾಲ್ ಬೈಲ್ ವಾರ್ಡಿನಲ್ಲಿ 7 ಲಕ್ಷ ರೂ ವೆಚ್ಚದ ತಡೆಗೋಡೆ ದುರಸ್ತಿ ಕಾಮಗಾರಿಗಳಿಗೆ ಸಾರ್ವಜನಿಕರ ಮೂಲಕ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಶೀಘ್ರವೇ ಕಾಮಗಾರಿ ನಡೆಯಲಿದ್ದು ಸಾರ್ವಜನಿಕರು ಅಭಿವೃದ್ಧಿಯ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಬೇಕು ಎಂದಿದ್ದಾರೆ.


Spread the love

Exit mobile version