Home Mangalorean News Kannada News ಮಂಗಳೂರು ನಗರ ಪೊಲೀಸ್ ಆಯುಕ್ತ ಸಹಿತ ದ.ಕ.ಜಿಲ್ಲೆಯ 25 ಮಂದಿಗೆ ಮುಖ್ಯಮಂತ್ರಿ ಪದಕ

ಮಂಗಳೂರು ನಗರ ಪೊಲೀಸ್ ಆಯುಕ್ತ ಸಹಿತ ದ.ಕ.ಜಿಲ್ಲೆಯ 25 ಮಂದಿಗೆ ಮುಖ್ಯಮಂತ್ರಿ ಪದಕ

Spread the love

ಮಂಗಳೂರು ನಗರ ಪೊಲೀಸ್ ಆಯುಕ್ತ ಸಹಿತ ದ.ಕ.ಜಿಲ್ಲೆಯ 25 ಮಂದಿಗೆ ಮುಖ್ಯಮಂತ್ರಿ ಪದಕ

ಮಂಗಳೂರು: ಪೊಲೀಸ್ ಇಲಾಖೆಯಲ್ಲಿನ ಸೇವೆಯನ್ನು ಪರಿಗಣಿಸಿ 2024ನೆ ಸಾಲಿನ ಮುಖ್ಯಮಂತ್ರಿ ಪದಕದ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಲಾಗಿದೆ. ಇಲಾಖೆಯ 197 ಪೊಲೀಸ್ ಅಧಿಕಾರಿ/ಸಿಬ್ಬಂದಿಯ ಪೈಕಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸಹಿತ ದ.ಕ.ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ 25 ಮಂದಿಗೆ ಮುಖ್ಯಮಂತ್ರಿಯ ಪದಕ ಪ್ರಕಟಿಸಲಾಗಿದೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್, ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಬಿ., ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎಂ., ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲ ಠಾಣೆಯ ಎಸ್ಸೈ ಸಂತೋಷ್ ಕುಮಾರ್ ಎಸ್., ಸುರತ್ಕಲ್ ಠಾಣೆಯ ಎಸ್ಸೈ ರಾಘವೇಂದ್ರ ಮಂಜುನಾಥ ನಾಯ್ಕ್, ಕಂಕನಾಡಿ ನಗರ ಠಾಣೆಯ ಎಚ್‌ಸಿ ರೆಜಿ ವಿ.ಎಂ., ಮಂಗಳೂರು ಸಿಸಿಬಿ ಘಟಕದ ಎಸ್ಸೈ ಶೀನಪ್ಪ, ಎಆರ್‌ಎಸ್‌ಐ ರಿತೇಶ್, ಎಚ್‌ಸಿಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ, ವಿಜಯ ಶೆಟ್ಟಿ, ಪಿಸಿಗಳಾದ ಪುರುಷೋತ್ತಮ, ಶ್ರೀಧರ, ಪ್ರಕಾಶ್ ಸತ್ತಿಹಳ್ಳಿ, ಅಭಿಷೇಕ್, ಸುರತ್ಕಲ್ ಠಾಣೆಯ ಎಚ್‌ಸಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ಸೆನ್ ಠಾಣೆಯ ಎಸ್ಸೈ ಗುರಪ್ಪ ಕಾಂತಿ, ಎಚ್‌ಸಿ ಪ್ರವೀಣ್ ಎಂ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.


Spread the love

Exit mobile version