Home Mangalorean News Kannada News ಮಂಗಳೂರು: ನೀರಿನ ಕೊರತೆ ಹಿನ್ನೆಲೆ ಮೇ 4ರಿಂದ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ

ಮಂಗಳೂರು: ನೀರಿನ ಕೊರತೆ ಹಿನ್ನೆಲೆ ಮೇ 4ರಿಂದ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ

Spread the love

ಮಂಗಳೂರು: ನೀರಿನ ಕೊರತೆ ಹಿನ್ನೆಲೆ ಮೇ 4ರಿಂದ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ

ಮಂಗಳೂರು: ಬೇಸಿಗೆ ತೀವ್ರತೆಯಿಂದ ಹಾಗೂ ನೇತ್ರಾವತಿ ನದಿಯ ನೀರಿನ ಒಳಹರಿವು ನಿಂತಿರುವ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಮೇ 4ರಿಂದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಲಭ್ಯವಿರುವ ನೀರನ್ನು ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ (ಸುರತ್ಕಲ್) ಭಾಗಗಳಿಗೆ ಪರ್ಯಾಯ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಸಮ ದಿನಗಳು (04-05-2026): ಬೆಂದೂರು ರೇಚಕ ಸ್ಥಾವರ: ಕೋರ್ಟ್ ವಾರ್ಡ್, ಕಾರ್ ಸ್ಟ್ರೀಟ್, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಗೋರಿಗುಡ್ಡೆ, ಸೂಟರ್ ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಬೆಂದೂರು ಲೋಲೆವಲ್ ಪ್ರದೇಶಗಳು, ಬೋಳೂರು ಪ್ರದೇಶ

ಪಡೀಲ್ ರೇಚಕ ಸ್ಥಾವರ, ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜೆಪ್ಪಿನಮೊಗರು, ಬಿಕರ್ನಕಟ್ಟೆ ಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು

ಶಕ್ತಿನಗರ ಟ್ಯಾಂಕ್: ಕುಂಜತ್ ಬೈಲ್, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೊಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು

ತುಂಬೆ – ಪಣಂಬೂರು ಡೈರೆಕ್ಟ್ ಲೈನ್ : ಕಂಕನಾಡಿ, ನಾಗುರಿ, ಪಂಪ್ ವೆಲ್, ಬಲ್ಲೂರು ಗುಡ್ಡೆ, ಪಡೀಲ್

ಬೆಸ ದಿನಗಳು (05-05-2026): ಪಣಂಬೂರು ರೇಚಕ ಸ್ಥಾವರ: ಸುರತ್ಕಲ್, ಎನ್ ಐ ಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರುಮ ಮೀನ ಕಳಿಯ

ಪಡೀಲ್ ರೇಚಕ ಸ್ಥಾವರ: ಬಜಾಲ್, ಜಲ್ಲಿಗುಡ್ಡೆಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೇ ಸ್ಟೇಷನ್ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಗೂಡ್ ಶೆಡ್, ಧಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರ ನಗರ,

ಶಕ್ತಿನಗರ ಟ್ಯಾಂಕ್ : ಕಂಡೆಟ್ಟು, ಕುಲಶೇಕರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ.

ತುಂಬೆ – ಪಣಂಬೂರು ಡೈರೆಕ್ಟ್ ಲೈನ್: ಮೂಡ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್ ಹೌಸ್, ಕೂಳೂರು ಪಂಪ್ ಕಾಪಿಕಾಡ್, ದಡ್ಡಲ್ ಪ್ರದೇಶ, ಬಂಗ್ರ ಕೂಳೂರು.

ಮುಖ್ಯ ಸೂಚನೆಗಳು:
• ಕಟ್ಟಡ ನಿರ್ಮಾಣ, ವಾಹನ ತೊಳೆಯುವ ಸರ್ವಿಸ್ ಸೆಂಟರ್ಗಳಿಗೆ ನೀರಿನ ಜೋಡಣೆ ತಾತ್ಕಾಲಿಕವಾಗಿ ಕಡಿತಗೊಳಿಸಲಾಗುತ್ತದೆ.
• ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡಿದರೆ ಮುನ್ನೋಟ ಇಲ್ಲದೆ ಸಂಪರ್ಕ ಕಡಿತಗೊಳಿಸಲಾಗುತ್ತದೆ.

ಸಹಾಯಕ್ಕಾಗಿ ಸಂಪರ್ಕ:
• ಪಡೀಲ್ ರೇಚಕ ಸ್ಥಾವರ: 0824-2230840
• ಪಣಂಬೂರು ರೇಚಕ ಸ್ಥಾವರ: 0824-2220364
• ಮಹಾನಗರಪಾಲಿಕೆ ವಾಟ್ಸಾಪ್: 9449007722
• ಕಂಟ್ರೋಲ್ ರೂಮ್: 0824-2220319

ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿ, ನಗರಪಾಲಿಕೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.


Spread the love

Exit mobile version