Home Mangalorean News Kannada News ಮಂಗಳೂರು ನೂತನ ದರ್ಮಾಧ್ಯಕ್ಷರ ದೀಕ್ಷೆ ಹಾಗೂ ಪಟ್ಟಾಬೀಷೇಕ, ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಇಲಾಖೆಗಳೊಡನೆ ಸಮಾಲೋಚನೆ

ಮಂಗಳೂರು ನೂತನ ದರ್ಮಾಧ್ಯಕ್ಷರ ದೀಕ್ಷೆ ಹಾಗೂ ಪಟ್ಟಾಬೀಷೇಕ, ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಇಲಾಖೆಗಳೊಡನೆ ಸಮಾಲೋಚನೆ

Spread the love

ಮಂಗಳೂರು ನೂತನ ದರ್ಮಾಧ್ಯಕ್ಷರ ದೀಕ್ಷೆ ಹಾಗೂ ಪಟ್ಟಾಬೀಷೇಕ, ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಇಲಾಖೆಗಳೊಡನೆ ಸಮಾಲೋಚನೆ

 

ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್‍ರವರು ರೊಜಾರಿಯೊ ಚರ್ಚ್ ಕಲ್ಚರಲ್ ಸಭಾಂಗಣದಲ್ಲಿ ಸಪ್ಟೆಂಬರ್ 15 ರಂದು ನಡೆಯುವ ಮಂಗಳೂರು ಧರ್ಮಾಧ್ಯಕ್ಷರ ದೀಕ್ಷೆ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ವಿವಿಧ ಇಲಾಖೆಗಳ ಆಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಈ ಕಾರ್ಯಕ್ರಮವು ಕೇವಲ ಕ್ರೈಸ್ತ ಸಮುದಾಯಕ್ಕೆ ಸೀಮಿತವಾಗಿರದೆ  ಇದು ಇಡೀ ಸಮಾಜದ ಸಂಭ್ರಮವಾಗಿದೆ. ಈ ನೆಲೆಯಲ್ಲಿ ರೊಜಾರಿಯೊ ಚರ್ಚಿನ ರಸ್ತೆಗಳು, ದಾರಿದೀಪಗಳನ್ನು ದುರಸ್ತಿಗೊಳಿಸಲು ಹಾಗೂ ನೀರಿನ ಸಮರ್ಪಕ ಸರಬರಾಜು ಸಪ್ಟೆಂಬರ್ 10ರೊಳಗೆ ಮುಗಿಸಲು ಆದೇಶ ನೀಡಿದರು. ಪೆÇೀಲಿಸ್ ಇಲಾಖೆಗಳಿಂದ ಶಿಸ್ತು ಪಾಲನೆ, ಸುಗಮ ಸಾರಿಗೆ ವ್ಯವಸ್ಥೆ, ವಾಹನ ನಿಲುಗಡೆ, ಪೋಲಿಸ್ ಆಗ್ನಿಶಾಮಕದಳ, ಆರೋಗ್ಯ ಇಲಾಖೆಗಳು ಸಮರ್ಪಕ ಕಾರ್ಯನಿರ್ವಹಿಸುವಂತೆ ಆದೇಶಿಸಿದರು. ಮಹಾನಗರ ಪಾಲಿಕೆ ಹಾಗೂ ಪೋಲೀಸ್ ಇಲಾಖೆಗಳೊಡನೆ ಹೊಂದಾಣಿಕೆ ನಡೆಸಲು ಸ್ವಯಂ ಸೇವಕ ಸಂಚಾಲಕರಾದ ಶ್ರೀ ಸುಶಿಲ್ ನೊರೊನ್ಹಾರವರಿಗೆ ಸಚಿವರು ಜವಾಬ್ದಾರಿಯನ್ನು ನೀಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ ಧರ್ಮಧ್ಯಕ್ಷರಾದ ಆತೀ ವಂದನೀಯ ಅಲೋಶಿಯಸ್ ಪೌಲ್ ಡಿ’ಸೋಜರವರು ಎಲ್ಲಾರನ್ನು ಸ್ವಾಗತಿಸಿ ಈ ಒಂದು ಕಾರ್ಯಕ್ರಮವನ್ನು ಸಂಯೋಜಿಸಲು ಮುತುವರ್ಜಿ ವಹಿಸಿದ ಉಸ್ತುವಾರಿ ಸಚಿವರನ್ನು ಆಭಿನಂದಿಸಿದರು. ಮಾಜಿ ಶಾಸಕರಾದ ಶ್ರೀ ಜೆ.ಆರ್ ಲೋಬೋರವರು ಜಿಲ್ಲಾಡಳಿತವು ಸಮರ್ಪಕ ಕಾರ್ಯ ನಿರ್ವಹಿಸುವಂತೆ ವಿನಂತಿಸಿದರು. ಸಹ ಸಂಯೋಜಕರಾದ ಶ್ರೀ ಎಂ.ಪಿ ನೊರೊನ್ಹಾರವರು ಮಾತಾನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಥೊಲಿಕ್ ಕ್ರೈಸ್ತರು ಶೇಕಡಾ 15 ರಷ್ಟು ಇದ್ದರು ಅವರು ನಡೆಸುತ್ತಿರುವ ವಿವಿಧ ಶಾಲಾಕಾಲೇಜುಗಳು, ವೈಧ್ಯಕೀಯ ಸೇವೆ, ಆಶ್ರಮ ಮತ್ತಿತ್ತರ ಹಲವಾರು ಸೇವಾ ಸಂಸ್ಥೆಗಳು ಶೇಕಡಾ 50 ರಷ್ಟು ಸಮಾಜದಲ್ಲಿ ಸೇವೆ ನೀಡುತ್ತಿದ್ದು ಈ ಎಲ್ಲಾ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಗಳ ಆಧ್ಯಕ್ಷರು ಬಿಷ್‍ಪ್‍ರವರಾಗಿದ್ದಾರೆ. ಬಿಷಪ್‍ರಿಗೆ ಧರ್ಮಾಪ್ರಾಂತ್ಯದ ಶಾಸನತ್ಮಾಕ ಆಡಳಿತ ಮತ್ತು ನ್ಯಾಯಾಂಗದ ಸರ್ವಾಧಿಕಾರವಿದ್ದು ಎಲ್ಲಾ ಸಂಸ್ಥೆಗಳು ಅವರ ಆಡಳಿತಕ್ಕೆ ಒಳಪಟ್ಟಿದೆ. ನಮ್ಮ ಈಗಿನ ಬಿಷಪ್ ಕಳೆದ 22 ವರ್ಷಗಳಿಂದ ಬಿಷಪ್‍ರಾಗಿದ್ದು ನೂತನ ಬಿಷಪ್ ಮೊನ್ಸಿಂಜರ್ ಪೀಟರ್ ಪೌಲ್ ಸಲ್ಡಾನ್ಹಾರ ದೀಕ್ಷೆ ಹಾಗೂ ಪಟ್ಟಾಭೀಷೆಕ ಮಹತ್ವದಾಯಕವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮೇಯರ್ ಭಾಸ್ಕರ್ ಕೆ, ಉಪಮೇಯರ್ ಮಹಮ್ಮದ್, ಶಶಿಧರ್ ಹೆಗ್ಡೆ, ಲ್ಯಾನ್ಸಿಲೋಟ್ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಸಹ ಸಂಚಾಲಕರಾದ ವಂದನೀಯ ವಿನ್ಸೆಂಟ್ ಮೋಂತೆರೊ, ವಂ ವಿಜಯ್ ವಿಕ್ಟರ್ ಲೋಬೊ, ವಂ ರೂಪೆಶ್ ಮಾಡ್ತಾ, ವಂ ರಿಚ್ಚರ್ಡ್ ಡಿ’ಸೋಜ, ಶ್ರೀ ಸುಶಿಲ್ ನೊರೊನ್ಹಾ, ಶ್ರೀ ರೋಯ್ ಕ್ಯಾಸ್ತೆಲಿನೊ, ಶ್ರೀ ಲುವಿ ಪಿಂಟೊ, ಶ್ರೀ ಮಾರ್ಸೆಲ್ ಮೊಂತೇರೊ ಮತ್ತು ಪಿಯುಸ್ ಮೋಂತೇರೊ ಹಾಗೂ ಬ್ಯಾಪ್ಟಿಸ್ಟ್ ಡಿ’ಸೋಜ ಹಾಗೂ ವಿವಿಧ ಇಲಾಖೆಗಳ ಆಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಅತೀ ವಂ ಜೆ.ಬಿ ಕ್ರಾಸ್ತಾ ರವರು ಧನ್ಯವಾದಗೈದರು.


Spread the love

Exit mobile version