Home Mangalorean News Kannada News ಮಂಗಳೂರು: ನೋ ಪಾರ್ಕಿಗ್  ಸ್ಥಳದಲ್ಲಿ ಕಾರು ನಿಲ್ಲಿಸಿದ ಸೇವಾದಳ ಅಧ್ಯಕ್ಷ ; ಪೋಲಿಸರೊಂದಿಗೆ ಮಾತಿನ ಚಕಮಕಿ

ಮಂಗಳೂರು: ನೋ ಪಾರ್ಕಿಗ್  ಸ್ಥಳದಲ್ಲಿ ಕಾರು ನಿಲ್ಲಿಸಿದ ಸೇವಾದಳ ಅಧ್ಯಕ್ಷ ; ಪೋಲಿಸರೊಂದಿಗೆ ಮಾತಿನ ಚಕಮಕಿ

Spread the love

ಮಂಗಳೂರು: ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಯೋರ್ವರು ಸರಿಯಾಗಿ ರಸ್ತೆ ನಿಯಮವನ್ನು ಪಾಲಿಸದೆ ಅನಗತ್ಯ ಗಲಾಟೆ ಎಬ್ಬಿಸಿ ಗೊಂದಲ ಸೃಷ್ಟಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.

ಶುಕ್ರವಾರ ಸಂಜೆ ಸುಮಾರು 7.50ರ ಹೊತ್ತಿಗೆ ಮ್ಯಾಗಲೋರಿಯನ್ ಪ್ರತಿನಿಧಿ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಫಳ್ನಿರ್ ರಸ್ತೆ ಸಂಪೂರ್ಣ ಜಾಮ್ ಆಗಿ ಯಾವುದೇ ವಾಹನ ತೆರಳಲು ಅಸಾಧ್ಯವಾಗಿತ್ತು. ಕಾರಣ ಯುನಿಟಿ ಆಸ್ಪತ್ರೆ ಬಳಿ ಪೋಲಿಸರು ಹಾಗೂ ಜನರ ನಡುವೆ ಮಾತಿನ ಚಕಮಕಿ. ಟ್ರಾಫಿಕ್ ಜಾಮ್ ಆಗಲು ಕಾರಣ ನಗರದಲ್ಲಿನ ಪ್ರತಿಷ್ಟಿತ ವ್ಯಕ್ತಿಯೋರ್ವರು ನೊ ಪಾರ್ಕಿಂಗ್ ಸ್ಥಳದಲ್ಲಿ ಅಲ್ಲದೆ ಮನೆಯ ಗೇಟಿನ ಮುಂದೆ ಕಾರನ್ನು ನಿಲ್ಲಿಸಿದ್ದು ಇದನ್ನು ಟ್ರಾಫಿಕ್ ಪೋಲಿಸರು ಲಾಕ್ ಮಾಡಿದ್ದರು.

ashraf_noparking_20150509-003

ಮನೆಯ ಮ್ಹಾಲಿಕರಿಗೆ ತಮ್ಮ ಕುಟುಂಬದೊಂದಿಗೆ ಹೊರ ಹೋಗಲು ಸಾಧ್ಯವಾಗದೆ ಇದ್ದು, ಅಷ್ಟರಲ್ಲಿ ಸ್ಥಳಕ್ಕೆ ಬಂದ ಕಾರಿನ ಮ್ಹಾಲಕರು ತಮ್ಮ ಕಾರಿಗೆ ಪೋಲಿಸರು ಲಾಕ್ ಮಾಡಿರುವುದನ್ನು ಗಮನಿಸದೆ ಕಾರನ್ನು ಚಲಾಯಿಸಿ ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ ವೇಳೆ ಕಾರಿನ ಚಕ್ರ ಜಾಮ್ ಆಗಿ ಮತ್ತೊಂದು ಸಮಸ್ಯೆ ಸೃಷ್ಟಿಯಾಯಿತು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೋಲಿಸರು ಮತ್ತು ಕಾರಿನ ಚಾಲಕ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಅಶ್ರಫ್ ನಡುವೆ ಮಾತಿನ ಚಕಮಕಿ ಆರಂಭವಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.

ಅಶ್ರಫ್ ವಾದದ ಪ್ರಕಾರ ತಾನು ಕಾರನ್ನು ಯುನಿಟಿ ಅಸ್ಪತ್ರೆಯ ಮುಂದೆ ನಿಲ್ಲಿಸಿ ಔಷದಿಗಳನ್ನು ತರುವ ಸಲುವಾಗಿ ಹೋಗಿದ್ದು, ಮರಳಿ ಬರುವಾಗ ಪೋಲಿಸರು ತನ್ನ ಕಾರಿನ ಚಕ್ರಕ್ಕೆ ಲಾಕ್ ಮಾಡಿದ್ದರು ಇದನ್ನು ನನ್ನ ಗಮನಕ್ಕೂ ತಂದಿಲ್ಲ. ಸಮಾಜದ ಒರ್ವ ಗೌರವಯುತ ವ್ಯಕ್ತಿ ತಾನಾಗಿದ್ದು ಪೋಲಿಸರ ವಿರುದ್ದ ಪ್ರಕರಣ ದಾಖಲಿಸುತ್ತೇನೆ ಎಂದರು.

ಪ್ರತಿನಿತ್ಯ ಸಾವಿರಾರು ಮಂದಿ ಸರಿಯಾಗಿ ರಸ್ತೆ ನಿಯಮಗಳನ್ನು ಪಾಲಿಸದೆ ತಮಗೆ ಮನ ಬಂದಂತೆ ವಾಹನಗಳನ್ನು ನಿಲ್ಲಿಸುತ್ತಿದ್ದು ಜನರಿಗೆ ನಡೆದಾಡಲು ಫುಟ್ಪಾತ್ ಕೂಡ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಒಂದು ವೇಳೆ ಪೋಲಿಸರು ನಿಯಮ ಪಾಲಿಸದ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳಲು ಹೋದರೆ ನಿಯಮ ಉಲ್ಲಂಘಿಸುವುದರೊಂದಿಗೆ ಪೋಲಿಸರೊಂದಿಗೆ ಜಗಳ ಆರಂಭಿಸುತ್ತಾರೆ ಇದರಿಂದ ಪೋಲಿಸರಿಗೂ ಕೂಡ ಏನೂ ಮಾಡದ ಪರಿಸ್ಥಿತಿಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಬಳಿಕ ಪೋಲಿಸರು ವಾಹನದ ಲಾಕ್ ತೆಗೆದಿದ್ದು, ಇದೇ ವೇಳೆ ಅಶ್ರಫ್ ವ್ಯಕ್ತಿಯೊರ್ವರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಅಶ್ರಫ್ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ಪೋಲಿಸ್ ಮತ್ತು ಅಶ್ರಫ್ ಅವರ ಪಾರ್ಕಿಂಗ್ ನಾಟಕದಲ್ಲಿ ಸಮಸ್ಯೆ ಅನುಭವಿಸಿದ್ದು ಮಾತ್ರ ಸಾಮಾನ್ಯ ಜನತೆ ಎನ್ನುವುದು ವಿಪರ್ಯಾಸವೇ ಸರಿ.

Mangaluru: Commotion after Wheel-locking of District Seva Dal Chief Ashraf’s Car in Prohibited Area

 


Spread the love

Exit mobile version