ಮಂಗಳೂರು ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ
ಮಂಗಳೂರು: ನಗರದ ಕೋಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆರ್ಡಿಎಕ್ಸ್ ಐಇಡಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬೆದರಿಕೆಯನ್ನು ಶುಕ್ರವಾರ ಹಾಕಲಾಗಿದೆ.
ಶುಕ್ರವಾರ ಮುಂಜಾವ ಸುಮಾರು 2:30ರ ವೇಳೆಗೆ ನ್ಯಾಯಾಲಯದ ಇಮೇಲ್ ಐಡಿಗೆ ಬೆದರಿಕೆ ಬಂದಿದೆ. ಈ ಮಾಹಿತಿಯು ಸಂಜೆಯ ವೇಳೆಗೆ ಕೋರ್ಟ್ ಸಿಬ್ಬಂದಿ ಗಮನಕ್ಕೆ ಬಂತು ಎನ್ನಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅದರಂತೆ ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದರು. ಆದರೆ ಯಾವುದೇ ಕರುಹು ಕಾಣಲಿಲ್ಲ. ಬಳಿಕ ಇದೊಂದು ಹುಸಿ ಇಮೇಲ್ ಬೆದರಿಕೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
rajagiri_marudhayan@outlook.com| ಎನ್ನುವ ಇಮೇಲ್ ಐಡಿಯಿಂದ ಅಪರಿಚಿತ ವ್ಯಕ್ತಿಯೊಬ್ಬ ಇಮೇಲ್ ಕಳುಹಿಸಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಬಂದರು ಪೊಲೀಸರು ತಿಳಿಸಿದ್ದಾರೆ.