ಮಂಗಳೂರು| ಮೀನು ವ್ಯಾಪಾರಿಯ ಕೊಲೆಯತ್ನ ಪ್ರಕರಣ: ರೌಡಿಶೀಟರ್ ಕೋಡಿಕೆರೆ ಲೋಕೇಶ್ ಬಂಧನ
ಮಂಗಳೂರು : ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಉಳ್ಳಾಲದ ಮೀನು ವ್ಯಾಪಾರಿಯ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ರೌಡಿಶೀಟರ್ ಕೋಡಿಕೆರೆ ಲೋಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಯಾದ ಮರುದಿನ ಮುಂಜಾವ ಕೋಡಿಕೆರೆ ಲೋಕೇಶ್ ಗ್ಯಾಂಗ್‌ನಿಂದಪ್ರತೀಕಾರದ ಯತ್ನ ನಡೆದಿತ್ತು. ಅಂದರೆ ಕುಂಟಿಕಾನ ಬಳಿ ಉಳ್ಳಾಲದ ಮೀನು ವ್ಯಾಪಾರಿ ಲುಕ್ಮಾನ್ ಎಂಬವರನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿತ್ತು. ದುಷ್ಕರ್ಮಿಗಳು ಲುಕ್ಮಾನ್‌ನನ್ನು ಅಟ್ಟಾಡಿಸಿ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿದ್ದರು. ಈ ವೇಳೆ ಮಹಿಳೆಯೊಬ್ಬರು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ಪರಾರಿಯಾ ಗಿದ್ದರು. ಇದರಿಂದ ಲುಕ್ಮಾನ್ ಅಪಾಯದಿಂದ ಪಾರಾಗಿದ್ದರು. ಇದೀಗ ರೌಡಿಶೀಟರ್ ಕೋಡಿಕೆರೆ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.