ಮಂಗಳೂರು: ಜೂನ್ 21 2015 ಭಾನುವಾರದಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ನಿನಲ್ಲಿ ಕೂಡ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಪೂವರ್ಾಹ್ನ 9.00ಕ್ಕೆ ಆಯುಷ್ ಸಚಿಯಾಲಯ ಬಿಡುಗಡೆ ಮಾಡಿದಂತಹ ವಿಶೇಷ ಸಿಡಿ ಪ್ರದರ್ಶನದೊಂದಿಗೆ ಆರಂಭಗೊಂಡಿತು. ನಂತರ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರು ಆಶಯ ಭಾಷಣದಲ್ಲಿ : ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಯೋಗವನ್ನು ಹೇಗೆ ಅಳವಡಿಸಿಕೊಳ್ಳಬೇಕು ಇದು ಏಕಾಗ್ರತೆಗೆ ಹೇಗೆ ಸಹಾಯಕ ಎಂಬುದನ್ನು ಸೋದಾಹರಣವಾಗಿ ವಿವರಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಕ್ಯಾಪ್ಟನ್ಗಣೇಶ್ಕಾಣರ್ಿಕ್ ಅವರುಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ನಮ್ಮ ಭಾರತೀಯ ಪರಂಪರೆಯ ಬಗ್ಗೆ ನಮ್ಗೆ ಹೆಮ್ಮೆ ಇರಬೇಕು. ಋಷಿಮುನಿಗಳು ಕಂಡು ಹುಡುಕಿದ ಸತ್ಯಸಂಗತಿಗಳನ್ನು ಇವತ್ತು ನಮಗೆ ಓದಿಕೊಂಡು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಯೋಗವನ್ನುಇಡೀ ವಿಶ್ವವೇ ಹೇಗೆ ಸ್ವೀಕರಿಸಿದೆ ಅದರ ಮಹತ್ವವನ್ನು ನಾವೆಲ್ಲ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಇಂದಿನ ಯೋಗದಿನ ಸಾರ್ಥಕವಾಗುವುದು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ವಿಶೇಷ ಅತಿಥಿಗಳಾಗಿ ಬೆಂಗಳೂರು ವಲಯದರಾಷ್ತ್ರಿಯ ಸೇವಾ ಯೋಜನೆಯ ಯುವ ಘಟಕದ ಅಧಿಕಾರಿ ಶ್ರೀ ಉಪ್ಪಿನ ಹಾಗೂ ಯೋಗಾಚಾರ್ಯ ಡಾ. ಶಂಕರನಾರಾಯಣ ಆಗಮಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆವಿಷ್ಕಾರ್ಯೋಗಕೇಂದ್ರದ ನಿದರ್ೆಶಕರಾದ ಶ್ರೀ ಕುಶಾಲಪ್ಪಗೌಡ ಹಾಗೂ ಅವರ ತಂಡ ವಿವೇಕಾನಂದ ಕೇಂದ್ರದ ಮಂಗಳೂರು ಶಾಖೆಯ ಸಂಚಾಲಕರಾದ ಶ್ರೀ ಮೋಹನ್ಕುಂಬ್ಳೇಕರ್ ಹಾಗೂ ಪ್ರೋ. ಶಿಕಾರಿಪುರ ಕೃಷ್ಣಮೂತರ್ಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಆವಿಷ್ಕಾರಯೋಗಕೇಂದ್ರದ ವಿದ್ಯಾಥರ್ಿಗಳಿಂದ ಯೋಗ ಪ್ರಾತ್ಯಕ್ಷಿಕೆೆ ನಡೆಯಿತು. ಡಾ. ಶಂಕರನಾರಾಯಣ ನೆರೆದಿದ್ದ ವಿದ್ಯಾಥರ್ಿಗಳಿಂದ ಆಸನ ಪ್ರಾಣಾಯಾಮ ಮಾಡಿಸಿದರು.
ಎನ್ಎಸ್ಎಸ್ ಸಂಯೋಜಕಿಪ್ರೋ. ವಿನಿತಾರೈ ಪ್ರಾಸ್ತಾವಿಸಿ ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ವಿದ್ಯಾಲಯದಉಪನ್ಯಾಸಕ ಸಂತೋಷ ಆಳ್ವ ನಿರೂಪಿಸಿ ವಂದಿಸಿದರು.