Home Mangalorean News Kannada News ಮಂಗಳೂರು : ರಾಷ್ಟ್ರದ ಏಕತೆ, ಅಖಂಡತೆಗಾಗಿ ಎಬಿವಿಪಿ ವತಿಯಿಂದ ‘ತಿರಂಗಾ ರ್ಯಾಲಿ’

ಮಂಗಳೂರು : ರಾಷ್ಟ್ರದ ಏಕತೆ, ಅಖಂಡತೆಗಾಗಿ ಎಬಿವಿಪಿ ವತಿಯಿಂದ ‘ತಿರಂಗಾ ರ್ಯಾಲಿ’

Spread the love

ಮಂಗಳೂರು:  ನಗರದಲ್ಲಿ ಸಹ ಬೃಹತ್ “ದೇಶ ಮೊದಲು- ತಿರಂಗ ರ್ಯಾಲಿ” ಆಯೋಜಿಸಲಾಯಿತು. ನಗರದ ಪಿ.ವಿ.ಎಸ್ ವೃತ್ತದಿಂದ ಪ್ರಾರಂಭವಾದ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾಕೀ ಜೈ, ವಂದೇ ಮಾತರಂ, ಜಮ್ಮು ಮತ್ತು ಕಾಶ್ಮೀರ-ಭಾರತ ಮಾತೆಯ ಸಿಂಧೂರ, ದೇಶದ ರಕ್ಷಣೆ ನಮ್ಮ ಹೊಣೆ- ನಮ್ಮ ಹೊಣೆ, ಭಯೋತ್ಪಾದಕ ಬೆಂಬಲಿಗರಿಗೆ-! ದಿಕ್ಕಾರ!!, ನಮ್ಮದು ನಮ್ಮದು- ಕಾಶ್ಮೀರ ನಮ್ಮದು, ಉಳಿಸಿ ಉಳಿಸಿ- ಜೆ. ಎನ್. ಯು ಉಳಿಸಿ, ರಾಷ್ಟ್ರವಿರೋಧಿಗಳಿಗೆ  ಘೋಷಣೆಗಳನ್ನು ಕೂಗಿದರು.

abvp-protest-mangalore - 2016-02-18 (2)

ನಂತರ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಸಂಚಾಲಕ್ ಸುದಿತ್‍ರವರು, ಈ ದೇಶದ ಯೋಧರು ಕೊರೆಯುವ -40º ಚಳಿಯಲ್ಲಿ ದೇಶ ಕಾಯುತ್ತಿದ್ದರೆ, ಈ ನೆಲದ ಅನ್ನ ತಿಂದು, ಈ ನೆಲದ ನೀರು ಕುಡಿದ ಕೆಲ ವಿಕೃತ ಮನಸ್ಸುಗಳು ದೇಶವನ್ನು ತುಂಡರಿಸುವ ಮಾತುಗಳನ್ನಾಡಿದವು. ಯಾವ ದೇಶಪ್ರೇಮಿ ತಾನೇ ಈ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರಲು ಸಾಧ್ಯ? ದೇಶ ತುಂಡರಿಸುವ ಮಾತುಗಳನ್ನಾಡುವ ಕೆಲ ಒಡಕಿ ಧ್ವನಿಗಳಿಗೆ ಉತ್ತರವಾಗಿ, ಸಾವಿರ ಅಫ್ಜಲ್, ಸಾವಿರ ಯಾಕೂಬ್, ಸಾವಿರ ಮಕ್ಬೂಲ್‍ರಿಂದ ಈ ದೇಶ ತುಂಡರಿಸಲು ಸಾಧ್ಯವಿಲ್ಲವೆಂದು ನಾವು ಕೋಟಿ ಕೋಟಿ ಸ್ವರಗಳ ಮೂಲಕ ಸಾರಿ ಹೇಳಬೇಕಾಗಿದೆ. ದೇಶವನ್ನು ನಾಶಗೊಳಿಸುವ ಮಾತನಾಡುವ ಮಾವೋವಾದಿಗಳು, ನಕ್ಸಲರು, ಪ್ರತ್ಯೇಕವಾದಿಗಳು ಹಾಗೂ ಅವರನ್ನು ಬೆಂಬಲಿಸುವ ಕಾಂಗ್ರೇಸಿನ ಒಳಸಂಚುಗಳನ್ನು, ಕುಟಿಲ ರಾಜನೀತಿಯನ್ನು ನಾವು, ಸಮಾಜ ಅರಿಯಬೇಕಿದೆ.

ಜೆ.ಎನ್.ಯುನಲ್ಲಿ ನಡೆದ ಘಟನೆ ಈ ರೀತಿಯ ಕೊಳಕು ಮನಸ್ಸುಗಳ ನಿಜವಾದ ಅನಾವರಣವಾಗಿದೆ. ದೇಶ ತುಂಡರಿಸುವ ಮಾತನಾಡುವ ರಾಷ್ಟ್ರದ್ರೋಹಿಗಳಿಗೆ ಹಾಗೂ ಅವರನ್ನು ಬೆಂಬಲಿಸುವ ವಿಕೃತ ಮನಸುಗಳಿಗೆ ಇಡೀ ಸಮಾಜದ ಒಕ್ಕೊರಲ ಧಿಕ್ಕಾರವಿದೆ. ಇಂತಹ ದುಷ್ಕøತ್ಯಗಳಿಗೆ ಸಾಕ್ಷಿಯಾಗುತ್ತಿರುವÀ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಎಬಿವಿಪಿ ಆಗ್ರಹಿಸುತ್ತದೆ ಎಂದರು.

ಇಂದು ಮಂಗಳೂರಿನಲ್ಲಿ ನಡೆದ ಈ ರ್ಯಾಲಿಯ ನೇತೃತ್ವವನ್ನು ಜಿಲ್ಲಾ ಸಂಚಾಲಕ್ ಚೇತನ್ ಪಡೀಲ್, ನಾರಯಣಗುರು ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಘ್ನೇಶ್ ಕೋಟೆ, ಕೆನರಾ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಮನ್, ವಿದ್ಯಾರ್ಥಿ ಮುಖಂಡರಾದ ಶೀತಲ್, ವಿಘ್ನೇಶ್, ಅಮರನಾಥ್, ಕೀರ್ತನ್ ದಾಸ್, ಶೋಧನ್, ಗಂಗಾಧರ್, ಅನುಷ, ಸುಷ್ಮಿತ, ರಶ್ಮಿ, ಸುಶಾನ್, ಧನುಷ್ ಮೊದಲಾದವರು ವಹಿಸಿದ್ದರು.


Spread the love

Exit mobile version