ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸರ ಹೆಸರಿಡುವಂತೆ ಸರ್ವ ಪ್ರಯತ್ನ ಮುಂದುವರಿಸೋಣ -ತೋನ್ಸೆ ಜಯಕೃಷ್ಣ ಎ ಶೆಟ್ಟಿ

Spread the love

ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸರ ಹೆಸರಿಡುವಂತೆ ಸರ್ವ ಪ್ರಯತ್ನ ಮುಂದುವರಿಸೋಣ -ತೋನ್ಸೆ ಜಯಕೃಷ್ಣ ಎ ಶೆಟ್ಟಿ
 

ಮುಂಬೈ: ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರಿ ಸಂಸ್ಥೆ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ ಆಗಸ್ಟ್ 3ರಂದು ಕುರ್ಲಾ ಪೂರ್ವದ ಬಂಟರ ಸಂಘದ ಬಂಟರ ಭವನದಲ್ಲಿ ಜರುಗಿತು .

ಈ ಸಭೆಯಲ್ಲಿ ಸಮಿತಿಯ ಮಹಾಪೋಷಕರೂ , ರಾಷ್ಟ್ರೀಯ ಜನನಾಯಕರೂ ಆದ ದಿವಂಗತ ಜಾರ್ಜ್ ಫೆರ್ನಾಂಡಿಸರ ಬಗ್ಗೆ ಅವರ ಅಭಿಮಾನಿಗಳ ಅನಿಸಿಕೆಗಳನ್ನು ಶ್ರೀಮತಿ ಸುರೇಖಾ ಎಚ್ ದೇವಾಡಿಗರರು ಸಂಕಲಿಸಿದ ಪುಸ್ತಕವೊಂದನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ಹಾಗೂ ಪ್ರಸ್ತುತ ಅಧ್ಯಕ್ಷರಾದ ಶ್ರೀ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಯವರು ಬಿಡುಗಡೆಗೊಳಿಸಿದರು .

ಪುಸ್ತಕವನ್ನು ಬಿಡುಗಡೆಗೊಳಿಸಿ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡುತ್ತಾ,  ಜಾರ್ಜ್ ಫೆರ್ನಾಂಡಿಸರ ವ್ಯಕ್ತಿತ್ವ , ರಾಷ್ಟ್ರಪ್ರೇಮ , ಜನಸಾಮಾನ್ಯರೊಂದಿಗಿನ ಅಭಿಮಾನ ಮತ್ತು ಕಳಕಳಿ, ಸಂಘರ್ಷ ಹಾಗೂ ಅವರ ಸಂಘಟಿತ ರಾಜಕೀಯದ ನೇತೃತ್ವದ ಬಗ್ಗೆ ವಿಶ್ಲೇಷಿಸುತ್ತಾ , ಸಮಿತಿಯ ಕಳೆದ 21 ವರ್ಷಗಳಲ್ಲಿ ಕೈಗೊಂಡ ಸಾರ್ವಜನಿಕ ಹಿತಾಸಕ್ತಿಯ ಎಲ್ಲಾ ಕಾರ್ಯಕ್ರಮಗಳಿಗೆ  ಜಾರ್ಜ್ ಫೆರ್ನಾಂಡೀಸರು ಪ್ರೇರಕ ಶಕ್ತಿಯಾಗಿ ಬೆಂಬಲಿಸಿ ಹುರಿದುಂಬಿಸಿದ ಅನೇಕ ಸಂದರ್ಭಗಳನ್ನು ನೆನಪಿಸಿ ದರು.

ಸಭೆಯಲ್ಲಿ ವಿವಿಧ ಪ್ರಮುಖ ಜಾತಿ ಸಂಘಟನೆಗಳ ನೇತಾರರು ಉಪಸ್ಥಿತರಿದ್ದು , ಸಮಿತಿಯು ಕೈಗೊಂಡ ನಿರ್ಣಯದಂತೆ , ಶ್ರೀ ಜಯಕೃಷ್ಣ ಶೆಟ್ಟಿಯವರು ದೆಹಲಿಯಲ್ಲಿ ಸಂಭಂದಪಟ್ಟ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆಯ ಕಾರ್ಯಚಾಲನೆ ಮಾಡಿಸಿದ ಪ್ರಯತ್ನಕ್ಕೆ ಅಭಿನಂದಿಸಿ , ತುಳುನಾಡಿನ ಹೆಮ್ಮೆಯ ಪುತ್ರ , ಜನನಾಯಕ ಹಾಗೂ ಆದರ್ಶ ರಾಜಕಾರಣಿ. ಶ್ರೀ ಜಾರ್ಜ್ ಫೆರ್ನಾಂಡಿಸರ ಗೌರವಾರ್ಥ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೆಸರಿಸಬೇಕೆಂದು ಒತ್ತಾಯಿಸಿ ಸರ್ವ ಪ್ರಯತ್ನ ಮುಂದುವರಿಸಬೇಕೆಂದು ನಿರ್ಧರಿಸಲಾಯಿತು .

ಸಮಿ ತಿಯ ಪ್ರಥಮ ಅಧ್ಯಕ್ಷ ಅಡ್ವ ಕೇಟ್ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟಿ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ. ಧರ್ಮಪಾಲ್ ಯು ದೇವಾಡಿಗ ಉಪಾಧ್ಯಕ್ಷರುಗಳಾದ ಎಲ್ _ವಿ ಅಮೀನ್ , ಪಿ ಧನಂಜಯ ಶೆಟ್ಟಿ,ಜಿ ಟಿ ಆಚಾರ್ಯ_,ಜತೆ ಕಾರ್ಯದರ್ಶಿ ಹೆನ್ರಿ ಸಿಕ್ವೇರಾ , ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ ಎಲ್ ಬಂಗೇರ , ಕುಲಾಲ ಸಂಘದ ಅಧ್ಯಕ್ಷ ಹಾಗೂ ಸಮಿತಿಯ ಜತೆ ಕಾರ್ಯದರ್ಶಿ ದೇವದಾಸ್ ಕುಲಾಲ್. ಪದ್ಮಶಾಲಿ ಸಂಘದ ಅಧ್ಯಕ್ಷ ಉತ್ತಮ ಶೆಟ್ಟಿಗಾರ್ ,ಕುಲಾಲ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಸಾಲಿಯಾನ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿತೇಂದ್ರ ಗೌಡ, ಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ ಅಧ್ಯಕ್ಷ ಡಾ . ಸುರೇಂದ್ರಕುಮಾರ್ ಹೆಗ್ಡೆ , ಬಂಟ್ಸ್ ಸಂಘ ಮುಂಬೈಯ ಡಾ. ಪ್ರಭಾಕರ್ ಶೆಟ್ಟಿ ಬೋಳ , ಭಂಡಾರಿ ಸೇವಾ ಸಂಘದ ರಾಕೇಶ್ ಭಂಡಾರಿ , ಸಮಿತಿ ಸದಸ್ಯರಾದ ದೇವಾಡಿಗ ಸಂಘದ ಮಾಲತಿ ಮೊಯಿಲಿ,ಸುರೇಖಾ ದೇವಾಡಿಗ,ರಂಜಿನಿ ಮೊಯಿಲಿ , ಜಯಂತಿ ಎಂ ದೇವಾಡಿಗ, ದೇವಾಡಿಗ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ ದೇವಾಡಿಗ, ಹೇಮನಾಥ ದೇವಾಡಿಗ , ರಮೇಶ್ ಮೊಯಿಲಿ,ನಿತೇಶ್ ದೇವಾಡಿಗ, ಯಶ್ ದೇವಾಡಿಗ ,ಶಿವಪ್ರಸಾದದೇವಾಡಿಗ, ವಾರ್ತಾ ವರದಿಗಾರರಾದ ವೇಣಿ ಪ್ರಸಾದ್ ಮತ್ತು ಯೋಗೇಶ್ ಶ್ರೀಯಾನ್ ರು ಉಪಸ್ಥಿತರಿದ್ದರು.

ಸಮಿತಿಯ ನಿಯೋಗವು , ಸಂಸ್ಥಾಪಕರ ನೇತೃತ್ವದಲ್ಲಿ ಕೇಂದ್ರ, ರಾಜ್ಯ ಸರಕಾರಗಳನ್ನು ಈಗಾಗಲೇ ಒತ್ತಾಯಿಸಿದಂತೆ . ಸ್ಥಳೀಯ ರಾಜಕಾರಣಿಗಳು, ವಿವಿಧ ಸಂಘಟನೆಗಳ ನೇತಾರರು , ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೇತಾರರು ಮತ್ತು ರಾಜ್ಯ ಸರಕಾರದ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೇಡಿಕೆಯ ಬಗ್ಗೆ ಮನವೊಲಿಸಬೇಕಾಗಿ ಸರ್ವಾನುಮತದಿಂದ ನಿರ್ಧರಿಸಲಾಯ್ತು .

ವಿಶೇಷ ಸಭೆಯನ್ನು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸರು ಸಂಯೋಜಿಸಿ ನಿರೂಪಣೆಗೈದರು .

ವರದಿ ಈಶ್ವರ ಎಂ. ಐಲ್
ಚಿತ್ರ ದಿನೇಶ್ ಕುಲಾಲ್


Spread the love

1 Comment

  1. Yes, George Fernandes was sincere, very brave, worked for people. We won Kargil war against Pak when he was defense Minister. Govt should consider naming Mangalore Airport to GFIA. Geroge Fernandies International Airport, Managalore.

Comments are closed.