Home Mangalorean News Kannada News ಮಂಗಳೂರು ವಿವಿ ಸತತ 8ನೇ ಬಾರಿ ಸೆಮಿಪೈನಲ್ ಲೀಗ್ ಹಂತಕ್ಕೆ

ಮಂಗಳೂರು ವಿವಿ ಸತತ 8ನೇ ಬಾರಿ ಸೆಮಿಪೈನಲ್ ಲೀಗ್ ಹಂತಕ್ಕೆ

Spread the love

ಮಂಗಳೂರು ವಿವಿ ಸತತ 8ನೇ ಬಾರಿ ಸೆಮಿಪೈನಲ್ ಲೀಗ್ ಹಂತಕ್ಕೆ

ವಿದ್ಯಾಗಿರಿ: ಅಖಿಲ ಭಾರತಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚ್ಯಾಂಪಿಯನ್‍ಷಿಪ್‍ನಲ್ಲಿ ಮಂಗಳೂರು ವಿವಿಯ ಪುರುಷರ ತಂಡ ಸತತ 8ನೇ ಬಾರಿಗೆ ಸೆಮಿ ಪೈನಲ್‍ಲೀಗ್ ಹಂತಕ್ಕೆ ಅರ್ಹತೆಯನ್ನು ಪಡೆದಿದೆ.

ಮಂಗಳೂರು ವಿವಿಯ ಜತೆಗೆ ವಿಶಾಖಪಟ್ಟಣಂನ ಆಂಧ್ರ ವಿವಿ, ಚೆನ್ನೈನ ಯುನಿವರ್ಸಿಟಿ ಆಫ್ ಮದ್ರಾಸ್, ತಮಿಳುನಾಡಿನ ಎಸ್.ಆರ್.ಎಮ್‍ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸೆಮಿಪೈನಲ್ ಲೀಗ್ ಹಂತಕ್ಕೆ ಅರ್ಹತೆ ಪಡೆದ ಇತರ ತಂಡಗಳು.

ಮೂರನೇ ದಿನ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಂಗಳೂರು ವಿವಿಯು ಭಾರತಿದಾಸನ್ ವಿವಿಯನ್ನು 35-25, 33-35,35-16 ಅಂಕಗಳಿಂದ ಸೋಲಿಸಿದೆ. ಹಾಗೆಯೇ ಉಳಿದ ಕ್ವಾರ್ಟರ್ ಫೈನಲ್ ಮ್ಯಾಚ್‍ಗಳಲ್ಲಿ ವಿಶಾಖಪಟ್ಟಣಂನ ಆಂಧ್ರ ವಿವಿ, ಚೆನ್ನೈನ ಬಿ.ಎಸ್.ಎ.ಆರ್‍ಕ್ರಸೆಂಟ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯನ್ನು 35-13, 35-4 ನೇರ ಸೆಟ್‍ನಲ್ಲಿ ಪರಾಭವಗೊಳಿಸಿದೆ. ಚೆನ್ನೈನ ಯುನಿವರ್ಸಿಟಿ ಆಫ್ ಮದ್ರಾಸ್, ಆಂಧ್ರಪ್ರದೇಶದ ಆದಿಕವಿ ನಾನಯ್ಯ ಯುನಿವರ್ಸಿಟಿಯನ್ನು 35-21, 21-35, 35-26 ಅಂಕಗಳಿಂದ ಸೋಲಿಸಿದೆ. ತಮಿಳುನಾಡಿನ ಎಸ್.ಆರ್.ಎಮ್‍ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಮಧುರೈನ ಎಮ್.ಕೆ ಯುನಿವರ್ಸಿಟಿಯನ್ನು 35-26, 35-22ರ ನೇರ ಹಣಾಹಣಿಯಲ್ಲಿ ಪರಾಜಯಗೊಳಿಸಿದೆ.

ಚ್ಯಾಂಪಿಯನ್‍ಷಿಪ್‍ನ ಸೆಮಿಫೈನಲ್‍ನ ಲೀಗ್ ಪಂದ್ಯಗಳು, ಅಖಿಲಭಾರತ ವಿವಿ ಇತಿಹಾಸದಲ್ಲೇ ಮೊದಲ ಬಾರಿಗೆ ಒಳಾಂಗಣ ಕ್ರೀಡಾಂಗಣದ ಹೊನಲು ಬೆಳಕಿನಡಿಯಲ್ಲಿ ಕೃತಕ ಹುಲ್ಲು ಹಾಸಿನ ಮ್ಯಾಟ್ ಅಂಗಣದಲ್ಲಿ ಫೆ.1ರ ಸಂಜೆಯಿಂದ ಜರುಗಿತು.


Spread the love

Exit mobile version