Home Mangalorean News Kannada News ಮಂಗಳೂರು : ಸರ್ಫಿಂಗ್ ಸ್ಪರ್ಧೆಗಳಿಗೆ 60 ಜನ ನೋಂದಣಿ – ಎ.ಬಿ.ಇಬ್ರಾಹಿಂ

ಮಂಗಳೂರು : ಸರ್ಫಿಂಗ್ ಸ್ಪರ್ಧೆಗಳಿಗೆ 60 ಜನ ನೋಂದಣಿ – ಎ.ಬಿ.ಇಬ್ರಾಹಿಂ

Spread the love

ಮಂಗಳೂರು:  (ಕರ್ನಾಟಕ ವಾರ್ತೆ): ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೇ 29 ರಿಂದ ಮೂರು ದಿನಗಳು ಮಂಗಳೂರು ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಉತ್ಸವದಲ್ಲಿ ಪಾಲ್ಗೊಳ್ಳಲು ಇಲ್ಲಿಯ ವರೆಗೆ 60 ಜನರು ತಮ್ಮ ಹೆಸರನ್ನು ನೊಂದಯಿಸಿದ್ದಾರೆ.ಇನ್ನೂ ಹಲವರು ಈ ಉತ್ಸವದಲ್ಲಿ ಪಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

3

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವೀ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸರ್ಫಿಂಗ್ ಉತ್ಸವ 2015 ಪಾರದರ್ಶಕವಾಗಿರಲು ಏಳು ಅಧಿಕರಿಗಳ ಉನ್ನತ ಮಟ್ಟದ ಮಾನಿಟರಿಂಗ್ ಕಮಿಟಿಯನ್ನು ರಚಿಸುವಂತೆ  ಸೂಚಿಸಿ,ಉತ್ಸವದ ಎಲ್ಲಾ ಖರ್ಚು ವೆಚ್ಚಗಳ ಬಗ್ಗೆ ಪಾರದರ್ಶಕತೆ ಇರುವಂತೆ ಎಚ್ಚರ ವಹಿಸಲು ಸಂಘಟಕರಿಗೆ ಸೂಚಿಸಿದ್ದಾರೆ.

ಮಾನಿಟರಿಂಗ್ ಕಮಿಟಿಯ ಗಮನಕ್ಕೆ ತಂದು ಖರ್ಚು ವೆಚ್ಚಗಳನ್ನು ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಸರ್ಫಿಂಗ್ ಉತ್ಸವ 2015 ರ ಕುರಿತು ಕ್ರೆಡೈ (ಕಟ್ಟಡ ನಿರ್ಮಾಣ ಸಂಸ್ಥೆ) ಪ್ರಚಾರದ ಹೊಣೆಯನ್ನು  ಪ್ರಾಯೋಜಕತ್ವದಲ್ಲಿ  ಮಾಡಲು ಮುಂದೆ ಬಂದಿದ್ದು, ಮಂಗಳೂರಿನ 10 ಪ್ರಮುಖ ವೃತ್ತಗಳಲ್ಲಿ ದೊಡ್ಡ ಪ್ರದರ್ಶನ  ಬೋರ್ಡ್ ಗಳನ್ನು  ಅಳವಡಿಸುವ ಜೊತೆಗೆ ಒಟ್ಟು 100 ಹೆದ್ದಾರಿ ಫಲಕಗಳನ್ನು ಪ್ರಚಾರಕ್ಕಾಗಿ ಅಳವಡಿಸಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕರಿ ಪಿ.ಐ. ಶ್ರೀವಿದ್ಯಾ, ಮಂಗಳೂರಿನ ಮಹನಗರಪಾಲಿಕೆ ಆಯುಕ್ತೆ ಹೆಪ್ಸಿಬಾ ರಾಣಿ ಕೋರ್ಲಪತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಭಾಕರ, ಯತೀಶ್ ಬೈಕಂಪಾಡಿ, ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮಮೋಹನ್ ಪರಾಂಜಪೆ  ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version