Home Mangalorean News Kannada News ಮಂಗಳೂರು| ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್: 4 ಇನ್‌ಸ್ಟಾಗ್ರಾಂ ಮತ್ತು 1 ಪೇಸ್ಬುಕ್ ಪೇಜ್ ರದ್ದು

ಮಂಗಳೂರು| ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್: 4 ಇನ್‌ಸ್ಟಾಗ್ರಾಂ ಮತ್ತು 1 ಪೇಸ್ಬುಕ್ ಪೇಜ್ ರದ್ದು

Spread the love

ಮಂಗಳೂರು| ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್: 4 ಇನ್‌ಸ್ಟಾಗ್ರಾಂ ಮತ್ತು 1 ಪೇಸ್ಬುಕ್ ಪೇಜ್ ರದ್ದು

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯ ಎಸಗುವಂತೆ ಪೋಸ್ಟ್ ಮಾಡುತ್ತಿದ್ದ 4 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜ್‌ಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಈ ಪೇಜ್‌ಗಳನ್ನು ಡಿಆ್ಯಕ್ಟಿವೇಟ್ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

vhp_bajrangadal_ashoknagar ಮತ್ತು shankha_nada ಎಂಬ 2 ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ದ ಉರ್ವ ಮತ್ತು dj bharath 2008, ಎಂಬ ಇನ್‌ಸ್ಟಾಗ್ರಾಂ ಪೇಜ್ ವಿರುದ್ದ ಕಾವೂರು ಹಾಗೂ karaavali official ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಶಿಕ್ ಮೈಕಾಲ ಎಂಬ ಪೇಸ್‌ಬುಕ್ ಪೇಜ್ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 6 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜನ್ನು ರದ್ದುಗೊಳಿಸಲಾಗಿದೆ.


Spread the love

Exit mobile version