Home Mangalorean News Kannada News ಮಂಗಳೂರು:  ಸೈಬರ್ ಕ್ರೈಮ್ ಪೋಲಿಸರ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

ಮಂಗಳೂರು:  ಸೈಬರ್ ಕ್ರೈಮ್ ಪೋಲಿಸರ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

Spread the love

ಮಂಗಳೂರು:  ಸೈಬರ್ ಕ್ರೈಮ್ ಪೋಲಿಸರ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

ಮಂಗಳೂರು: ಸೈಬರ್ ಕ್ರೈಮ್ ಪೋಲಿಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ತುಮಕೂರು ಜಿಲ್ಲೆ ಕೋತಿ ತೋಪು ನಿವಾಸಿ ಅರುಣ್ ಟಿ (27) ಎಂದು ಗುರುತಿಸಲಾಗಿದೆ.

ಆರೋಪಿಯು ಪೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್ , ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಸೈಬರ್ ಕ್ರೈಂ ಪೊಲೀಸ್ ಬೆಂಗಳೂರು ಸುಶೀಲ್ ಕುಮಾರ ಎಂದು ಹೇಳಿ ತನ್ನನ್ನು ಪರಿಚಯಿಸಿಕೊಂಡು ನಿಮ್ಮ ಮೇಲೆ ದೂರುಗಳು ಬಂದಿದೆ ನಿಮ್ಮನ್ನು ಅರೆಸ್ಟ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದು ಅದರಂತೆ ಈ ಮೇಲಿನ ಪ್ರಕರಣದ ಪಿರ್ಯಾಧಿಗೆ ಹೆದರಿಸಿ ಒಟ್ಟು 1,23,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿದೆ.

ಆರೋಪಿ ಮೇಲೆ ದಿನಾಂಕ: 15-07-2025 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 37/2025 ಕಲಂ. 66 (ಸಿ) 66 (ಡಿ) ಐಟಿ ಕಾಯ್ದೆ ಹಾಗೂ ಕಲಂ 112,308(2), 318(4) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ಆರೋಪಿತನ ಮೇಲೆ ಸೈಬರ್ ಪೊರ್ಟಲ್ ನಲ್ಲಿ ಒಟ್ಟು 11 ದೂರುಗಳು ದಾಖಲಾಗಿರುತ್ತವೆ

ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿತನನ್ನು ತುಮಕೂರಿನಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದು ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love

Exit mobile version