ಮಂಗಳೂರು: ಹಾಂಗ್ ಕಾಂಗ್ ತೆರಳಿದವರು ನಾಪತ್ತೆ
ಮಂಗಳೂರು: ಚೇತನ್ ರಾಮಚಂದ್ರ ಕರ್ಕೆರಾ (37) ಎಂಬವರು ಸಾಫ್ಟ್ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ನವೆಂಬರ್ 9 ರಿಂದ ಡಿಸೆಂಬರ್ 12 ತನಕ ಪ್ರವಾಸಕ್ಕೆಂದು ಹಾಂಗ್ಕಾಂಗ್ ದೇಶಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಉರ್ವಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: 5.2 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಕನ್ನಡ, ತುಳು, ಇಂಗ್ಲೀಷ್ , ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಜೀನ್ಸ್ ಪ್ಯಾಂಟ್ ಮತ್ತು ಜರ್ಕಿನ್, ಟೀ ಶರ್ಟ್ ಧರಿಸಿದ್ದರು.
ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಉರ್ವಾ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
