Home Mangalorean News Kannada News ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ – ಡಾ.ಡಿ.ವಿ.ಹೆಗ್ಗಡೆ

ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ – ಡಾ.ಡಿ.ವಿ.ಹೆಗ್ಗಡೆ

Spread the love

ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ- ಡಾ.ಡಿ.ವಿ.ಹೆಗ್ಗಡೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 10.001ನೇ ಪ್ರಗತಿಬಂಧು ಸ್ವ.ಸಹಾಯ ಸಂಘದ ಉದ್ಘಾಟನೆ-ಗಜಾ ಗುಂಡ್ಲ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಅಡಿಗಲ್ಲು.

ಧರ್ಮಸ್ಥಳ : ಮಾಲೂರು-ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಸಹೋದರರಂತೆ ಬಾಳ್ವೆ ಮಾಡಿಕೊಂಡು ಜೀವನ ನಡೆಸಬೇಕು ನೀರಿನ ವಿಚಾರದಲ್ಲಿ ದಾಯಾಧಿಗಳಂತೆ ಕಾದಾಡುವುದು ಸಮಂಜಸವಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

ಅವರು ಬುಧವಾರ ಪಟ್ಟಣದ ಹೊರವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡಿದ್ದ 10.001ನೇ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಉದ್ಘಾಟನೆ ಮತ್ತು ವಿವಿಧ ಅನುದಾನಗಳ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿ ಕರಾವಳಿ ಭಾಗದ ಹಾಗೂ ಬಯಲುಸೀಮೆ ಜನತೆಯ ನಡುವಿನ ಭಾಂದವ್ಯಅತ್ಯಂತ ಮಹತ್ವಪೂರ್ಣದಾಯಕವಾದದ್ದು. ಬಯಲು ಸೀಮೆಯ ಜನರಷ್ಟೇ ಕರಾವಳಿಯ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ.

image001dharmastala-heggade-20160609-001

ಕಳೆದ ಹತ್ತು ವರ್ಷಗಳಿಂದ ನೇತ್ರಾವತಿಯ ಹಂಚಿಕೆ ಶಬ್ದ ಕೇಳಿದರೆ ಹೋರಾಟ ಮಾಡಲು ನೇತೃತ್ವ ವಹಿಸಿ ಎಂದು ಕರಾವಳಿ ಭಾಗದಜನ ಕೇಳುತ್ತಾರೆ. ಬಯಲುಸೀಮೆಗೆ ಬಂದರೆ ಶಾಶ್ವತ ನೀರಾವರಿಗಾಗಿ ನೀವು ಮನಸ್ಸು ಮಾಡಿದರೆ ಬಗೆಹರಿಯುತ್ತದೆ ಎಂದು ಹೇಳುತ್ತಾರೆ. ಆದರೆ ಸರ್ಕಾರವು ಕರಾವಳಿ ಭಾಗದ ಜನತೆಯ ಮುಂದೆ ನೇತ್ರಾವತಿ ನದಿ ತಿರುವು ಅಥವಾ ನೇತ್ರಾವತಿ ನದಿ ಹಂಚಿಕೆಯ ಬಗ್ಗೆ ಸಮಗ್ರವಾದ ವರದಿಯನ್ನು ಮಂಡಿಸಿ ಒಪ್ಪಿಗೆ ಪಡೆದು ಎಲ್ಲರ ಸಹಮತದೊಂದಿಗೆ ಮತ್ತು ಅವರ ನಂಬಿಕೆಗೆ ದಕ್ಕೆ ಬಾರದಂತೆ ಯೋಜನೆಯನ್ನು ಪೂರ್ಣಗೊಳಿಸುವುದನ್ನು ಬಿಟ್ಟು ಕರಾವಳಿ ಹಾಗೂ ಬಯಲುಸೀಮೆಯ ಜನತೆಯ ನಡುವೆ ವಿರಸ ಮಾಡುವ ಕೆಲಸ ಖಂಡನೀಯ ಎಂದರು. ನೀರಿನ ವಿಚಾರದಲ್ಲಿ ಶ್ರೀಮಂಜುನಾಥ ಪರಿಹಾರವನ್ನು ಶೀಘ್ರದಲ್ಲೇ ಬಗೆಹರಿಸುವ ನಂಬಿಕೆಯಿದೆಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಮಾಲೂರುಗ್ರಾಮದೇವತೆ ಶ್ರೀಮಾರಿಕಾಂಭ ದೇವಿ ಲಭಿಸಿದ ಗಜಾ ಗುಂಡ್ಲ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸು ಮೂಲಕ ಇಡೀ ಮಾಲೂರು ಇತಿಹಾಸದ ಪುಗಳಲ್ಲಿ ಅತ್ಯಂತ ಹೆಚ್ಚು ಜನತೆ ಸೇರಿದ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ಶ್ರೀವೀರೇಂದ್ರ ಹೆಗ್ಗಡೆಯವರಿಗೆ ಶಾಸಕ ಕೆ.ಎಸ್.ಮಂಜುನಾಥ್‍ಗೌಡ ಹಾಗೂ ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಬೆಳ್ಳಿ ಕಿರೀಟಧಾರಣೆ ಮಾಡಿದರು. ಕೋಚಿಮುಲ್‍ನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆಯನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾವತಿಹೆಗ್ಗಡೆ, ಸಂಸದ ಕೆ.ಹೆಚ್.ಮುನಿಯಪ್ಪ, ಶಾಸಕ ಕೆ.ಎಸ್.ಮಂಜುನಾಥ್‍ಗೌಡ, ಮಾಜಿ ಸಚಿವಎಸ್.ಎನ್.ಕೃಷ್ಣಯ್ಯಶೆಟ್ಟಿ, ತಹಸೀಲ್ದಾರ್ ಎಸ್.ನಾಗರಾಜ್, ಜಿ.ಪಂಅಧ್ಯಕ್ಷೆಗೀತಮ್ಮ,ಉಪಾಧ್ಯಕ್ಷೆಯಶೋಧಮ್ಮ, ಸದಸ್ಯೆಗೀತಮ್ಮ, ತಾ.ಪಂಅಧ್ಯಕ್ಷೆ ತ್ರಿವರ್ಣ ರವಿ, ಸದಸ್ಯರಾದ ಹೆಚ್.ಎನ್. ಶ್ರೀನಾಥ್,  ಮಾಲಾ, ಸುಮಿತ್ರ,ಇ.ಓ ಸಂಜೀವಪ್ಪ, ಕೋಚಿಮುಲ್ ನಿದೇರ್ಶಕ ಕೆ.ವೈ. ನಂಜೇಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಶ್ರೀಮಾರಿಕಾಂಭ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ಪಿ.ವೆಂಕಟೇಶ್, ಪುರಸಭಾಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಸದಸ್ಯರಾದ ಎಂ.ಪಿ.ವಿಜಯಕುಮಾರ್, ಎಂ.ವಿ.ವೇಮನ, ಸಿ.ಪಿ.ನಾಗರಾಜ್, ಸಂಪಂತ್‍ಯಾದವ್, ಬೋರ್‍ರಮೇಶ್, ಜೆ.ಡಿ.ಎಸ್. ನಗರಾಧ್ಯಕ್ಷಟಿ.ರಾಮಚಂದ್ರ, ಅರಳೇರಿ ಗ್ರಾಮ ಪಂಚಾಯಿತಿಅಧ್ಯಕ್ಷೆ ಲಕ್ಷ್ಮೀಸುಬ್ರಮಣಿ,ಸಿ.ಪಿ.ಐರಾಘವೇಂದ್ರನ್, ಎಸ್.ಐ. ಎಂ.ಎಲ್.ಚೇತನ್‍ಕುಮಾರ್‍ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ಜನರಲ್ ಮ್ಯಾನೇಜರ್ ಜಿ.ಎಸ್.ರವಿಸುಧಾಕರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಡಾ.ಎಲ್.ಹೆಚ್.ಮಂಜುನಾಥ್, ಜಿಲ್ಲಾ ನಿದೇರ್ಶಕ ವಿ.ವಿಜಯ್‍ಕುಮಾರ್ ನಾಗನಾಳ, ತಾಲೂಕಿನ ಯೋಜನಾಧಿಕಾರಿ ರವಿ, ಇದ್ದರು.


Spread the love

Exit mobile version