Home Mangalorean News Kannada News ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ; ಬೈಂದೂರಿನಲ್ಲಿ ಆರೋಪಿ ಮೆಲ್ವಿನ್ ಬಂಧನ

ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ; ಬೈಂದೂರಿನಲ್ಲಿ ಆರೋಪಿ ಮೆಲ್ವಿನ್ ಬಂಧನ

Spread the love

ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ; ಬೈಂದೂರಿನಲ್ಲಿ ಆರೋಪಿ ಮೆಲ್ವಿನ್ ಬಂಧನ

ಕಾಸರಗೋಡು: ತಾಯಿಯನ್ನು ಕೊಲೆಗೈದ ಪ್ರಕರಣದ ಆರೋಪಿ ಪುತ್ರನನ್ನು ಮಂಜೇಶ್ವರ ಠಾಣೆ ಪೊಲೀಸರು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬಂಧಿಸಿದ್ದಾರೆ.

ವರ್ಕಾಡಿ ಸಮೀಪದ ನಿವಾಸಿ ಹಿಲ್ಡಾ ಮೊಂತೆರೋ ಅವರ ಪುತ್ರ ಮೆಲ್ವಿನ್ (33) ಬಂಧಿತ ಆರೋಪಿ.

ಮೊಬೈಲ್ ಲೋಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬೈಂದೂರಿನ ಕಾಲ್ತೋಡಿನಲ್ಲಿ ಬಂಧಿಸಲಾಗಿದ್ದು, ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿನಯ್ . ಕೆ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ ಕೊಲ್ಲೂರು ಸ್ಟೇಶನ್ ಪರಯ್ಯ ಮಠಪತಿ. ಮಾಳಪ್ಪ ದೇಸಾಯಿ. ಚಿದಾನಂದ ಬೈಂದೂರು ಪೊಲೀಸ್ ಸ್ಟೇಶನ್ ರವರು ಪಾಲ್ಗೊಂಡಿರುತ್ತಾರೆ

ಗುರುವಾರ ಮುಂಜಾನೆ ಘಟನೆ ನಡೆದಿತ್ತು. ಮಲಗಿದ್ದ ತಾಯಿ ಹಿಲ್ಡಾ ಅವರನ್ನು ಕೊಲೆಗೈದು ನಂತರ ಸುಟ್ಟು ಹಾಕಿ ಮನೆ ಸಮೀಪದ ಪೊದೆಗೆ ಎಸೆದಿದ್ದನು. ಮನೆಗೆ ಬಂದಿದ್ದ ನೆರೆಮನೆಯ ಲೋಲಿಟಾ ಅವರನ್ನೂ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದು, ಲೋಲಿಟಾ ಅವರು ಗಾಯಗೊಂಡಿದ್ದಾರೆ.

ಕೃತ್ಯದ ಬಳಿಕ ಆರೋಪಿ ಮೆಲ್ವಿನ್ ಆಟೋ ರಿಕ್ಷಾ ಮೂಲಕ ಹೊಸಂಗಡಿಗೆ ತಲಪಿ ಅಲ್ಲಿಂದ ಬಸ್ ಮೂಲಕ ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಕೊಲ್ಲೂರಿಗೆ ಪರಾರಿಯಾಗಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

Exit mobile version