Home Mangalorean News Kannada News ಮಠ ಮಂದಿರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ಸರಕಾರದ ಪಿತೂರಿ; ಮಟ್ಟಾರ್ ರತ್ನಾಕರ ಹೆಗ್ಡೆ

ಮಠ ಮಂದಿರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ಸರಕಾರದ ಪಿತೂರಿ; ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ಮಠ ಮಂದಿರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ಸರಕಾರದ ಪಿತೂರಿ; ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮಠ ಮಂದಿರಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾದುದ್ದರಿಂದ ಅದನ್ನ ಕೈ ಬಿಟ್ಟ ಸರಕಾರ ಕೇವಲ ಚುನಾವಣೆ ಕಾರಣಕ್ಕೆ ಸುತ್ತೋಲೆಯನ್ನು ವಾಪಾಸು ಪಡೆದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮಠ ಮಂದಿರಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾದುದ್ದರಿಂದ ಅದನ್ನ ಕೈ ಬಿಟ್ಟ ಸರಕಾರ ಇದೀಗ ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈ ಹಾಕಿದ್ದು ಇದು ಕರ್ನಾಟಕದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ. ಚುನಾವಣೆ ಹತ್ತಿರದಲ್ಲಿ ಇಲ್ಲದೆ ಇರುತ್ತಿದ್ದರೆ ಸರಕಾರ ತಾನು ಹೊರಡಿಸಿದ ಸುತ್ತೋಲೆಯನ್ನು ವಾಪಾಸು ಪಡೆಯುತ್ತಿರಲಿಲ್ಲ. ಕೇವಲ ಚುನಾವಣೆ ಕಾರಣಕ್ಕೆ ಸುತ್ತೋಲೆಯನ್ನು ವಾಪಾಸು ಪಡೆದಿದ್ದು ಮುಂದೆ ಎಂದಾದರೂ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‍ನ ಪ್ರಥಮ ಪ್ರಯತ್ನ ಮತ್ತೆ ಮಠ ಮಂದಿರ, ದೇವಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು. ಇದು ಹಿಂದೂಗಳ ಮೇಲೆ ನಡೆಯುತ್ತಿರುವ ಹಗಲು ದರೋಡೆಯಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕೆ ಸರಿಯಾದ ಉತ್ತರವನ್ನು ಕೊಡುವ ಮೂಲಕ ಕಾಂಗ್ರೆಸ್‍ನ ಬಣ್ಣ ಬಯಲು ಮಾಡಬೇಕಾಗಿದೆ ಮತ್ತು ಅವರಿಗೆ ಸರಿಯಾದ ಪಾಠವನ್ನು ರಾಜ್ಯದ ಜನತೆ ಕಲಿಸಬೇಕಾಗಿದೆ ಎಂದರು,

ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಆರಂಭದಲ್ಲಿ ಅಲ್ಪಸಂಖ್ಯಾತರ ಮೇಲಿದ್ದ 175 ರಿಂದ 184 ಪ್ರಕರಣಗಳನ್ನು ವಾಪಾಸು ಪಡೆದಿದ್ದು ವಾಪಾಸು ಪಡೆದ ದಿನದಿಂದ ರಾಜ್ಯದಲ್ಲಿ PFI, SDPI ಮತ್ತು K.F.D ಸಕ್ರೀಯರಾಗಿ ಹಿಂದೂಗಳ ಮರಣ ಹೋಮದಲ್ಲಿ ನಿರತರಾಗಿದ್ದು ಅದರ ಪರಿಣಾಮವನ್ನು ಇಂದು ಹಿಂದೂಗಳು ಎದುರಿಸುತ್ತಿದ್ದಾರೆ. ಇದೀಗ  ಮತ್ತೆ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ವಾಪಾಸು ಪಡೆಯಲು ಸುತ್ತೋಲೆ ಹೊರಡಿಸಿದ್ದು ಅದಕ್ಕೆ ತೀವ್ರ ವಿರೋದ ವ್ಯಕ್ತವಾದ ನಂತರ ವಾಪಾಸು ಪಡೆದಿದ್ದಾರೆ ಇದು ಸರಕಾರದ ತಾರತಮ್ಯ ಧೋರಣೆಗೆ ಕನ್ನಡಿ ಹಿಡಿದಂತಾಗಿದೆ. ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಸರಕಾರದ ಈ ಹಿಂದೂ ದಮನ ನೀತಿಯನ್ನು ನಾವು ಖಂಡಿಸಬೇಕಾಗಿದೆ ಎಂದರು.


Spread the love

Exit mobile version