ಮಡಂತ್ಯಾರ್ ನಲ್ಲಿ ಪೊಯೆಟಿಕಾ ಕವಿಗೋಷ್ಠಿ 40 ಮತ್ತು ಸಾಂಸ್ಕೃತಿಕ ಸಂಜೆ
ಮಡಂತ್ಯಾರ್: ಕೊಂಕಣಿ ಭಾಷೆಯ ಸಾಂಸ್ಕೃತಿಕ ವೆಭವವನ್ನು ಸಾರುವ ಕಾರ್ಯಕ್ರಮ ವಾದ 40ನೇ ಪೊಯೆಟಿಕಾ ಕವಿಗೋಷ್ಠಿಯು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮಡಂತ್ಯಾರ್ ಘಟಕ, ರಂಗ್ ತರಂಗ್ ಮಡಂತ್ಯಾರ್ ಮತ್ತು ಪೊಯೆಟಿಕಾ ಸಹಯೋಗದಲ್ಲಿ ಮಡಂತ್ಯಾರ್ ಸಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು.
ಮಡಂತ್ಯಾರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಡಾ. ಸ್ಟ್ಯಾನಿ ಗೋವಿಯಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಾಯಕ ಧರ್ಮಗುರು ಫಾ. ಲ್ಯಾರಿ ಪಿಂಟೋ ಪ್ರಾರ್ಥನೆಯನ್ನು ನೆರವೇರಿಸಿದರು.
ಘಟಕದ ಅಧ್ಯಕ್ಷ ಶ್ರೀ ವಿನ್ಸೆಂಟ್ ಡಿಸೋಜಾ ಅವರು ಸ್ವಾಗತ ಭಾಷಣ ನೀಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಅಧಿಕೃತವಾಗಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲಿಯೋ ರೋಡ್ರಿಗಸ್ ಅವರು ಉದ್ಘಾಟಿಸಿ, ಉದ್ಘಾಟನಾ ಭಾಷಣದಲ್ಲಿ ಸಮಾಜದಲ್ಲಿ ಸಾಹಿತ್ಯ ಮತ್ತು ಸಂಘಟನೆಯ ಪಾತ್ರದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ. ಟೈಸನ್ ಡಿಕುನ್ಹಾ ಅವರಿಗೆ ಸನ್ಮಾನಿಸಲಾಯಿತು.
ಮಾರ್ಗದರ್ಶನಕ್ಕಾಗಿ ಕ್ಯಾಥೋಲಿಕ್ ಸಭಾ ಕೇಂದ್ರ ಸಮಿತಿಯ ಸಲಹೆಗಾರರಾದ ಶ್ರೀ ರೋಲ್ಫಿ ಡಿಕೋಸ್ತಾ ಅವರಿಗೂ ಗೌರವ ಅರ್ಪಿಸಲಾಯಿತು
ಕಾರ್ಯಕ್ರಮದ ಹಿನ್ನೆಲೆಯಲ್ಲಿ ‘ಅಮಿ ಆನಿ ಆಮ್ಚಿಂ ’ ಸಂಘದ ಅಧ್ಯಕ್ಷರಾದ ಶ್ರೀ ಡೆನಿಸ್ ಡಿಸಿಲ್ವಾ ಕಥೋಲಿಕ್ ಸಭಾ ಕಾರ್ಯಕ್ರಮಗಳ್ನು ಶ್ಲಾಗಿಸಿ ಶುಭಾಷಯ ನೀಡಿದರು. ಇನ್ನಿತರ ಗಣ್ಯ ಅತಿಥಿಗಳಲ್ಲಿ , ಪಾಲನ ಮಂಡಳಿ ಉಪಾಧ್ಯಕ್ಷರಾದ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಾಸ್ರಾದೊ, ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ, ಸುರತ್ಕಲ್ ಮತ್ತು ಬೆಳ್ತಂಗಡಿ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೊನಿಸ್ ಉಪಸ್ಥಿತರಿದ್ದರು. ಬೆಳ್ತಂಗಡಿ ವಲಯದ ಹಲವಾರು ಪದಾಧಿಕಾರಿಗಳು ಹಾಗೂ ಊರಿನ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಭಾಗಗಳಿಂದ ಆಗಮಿಸಿದ 30 ಕವಿಗಳಾದ ಎಡಿ ಕಾಡ್ದೊಸ್ ತಾಕೊಡೆ, ಜೊಸ್ಸಿ ಪಿಂಟೊ ಕಿನ್ನಿಗೋಳಿ, ನವೀನ್ ಪಿರೇರಾ ಸುರತ್ಕಲ್ ಪೆದ್ರು ಪ್ರಭು ತಾಕೊಡೆ, ವಲೇರಿಯನ್ ಮೊರಸ್ ತಾಕೊಡೆ, ಜೆನೆಟ್ ಡಿಸೋಜ ಮಡಂತ್ಯಾರ್, ಮರಿಯ ಜೋರ್ಜ್ ಪಿಂಟೊ, ಕುಲ್ಶೇಕರ್, ಜುಲಿಯೆಟ್ ಮೊರಸ್ ದೆರೆಬೈಲ್, ಸ್ಟೇನಿಸ್ಲಾವ್ಸ್ ಡಿಸೋಜ ಕಿರೆಂ, ಹೆನ್ರಿ ಮಸ್ಕರೇನ್ಹಸ್ ಗಂಜಿಮಠ, ರೆಮಿ ಕಾಟಿಪಳ್ಳ, ಜೆರಾಲ್ಡ್ ಮೊರಾಸ್ ಮಡಂತ್ಯಾರ್, ಜೋರ್ಜ್ ಲಿಗೊರಿ ಡಿಸೋಜ ಸುರತ್ಕಲ್, ಲ್ಯಾನ್ಸಿ ಸಿಕ್ವೇರಾ ಸುರತ್ಕಲ್, ರೋಶನ್ ಕ್ಯಾಸ್ತೆಲಿನೊ ಪಾಲಡ್ಕಾ, ವಿನೊದ್ ಪಿಂಟೊ ತಾಕೊಡೆ, ರೋಶನ್ ಕ್ರಾಸ್ತಾ ಕುಲ್ಶೆಕರ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಜಾನೆಟ್ ಸೆರಾವೊ ಉಜಿರೆ, ರೇಶ್ಮಾ ಲೋಬೊ ತಾಕೊಡೆ, ಮೆಲಿಶಾ ಲಸ್ರಾದೊ ಮಡಂತ್ಯಾರ್, ಡಿಯೋನ್ ಫೆರ್ನಾಂಡಿಸ್ ಮಡಂತ್ಯಾರ್, ಲಿಲ್ಲಿ ಪಿರೇರಾ ನಾರಾವಿ, ಡಯಾನಾ ಫೆರ್ನಾಂಡಿಸ್ ಮಡಂತ್ಯಾರ್ ಮತ್ತು ತೆಲ್ಮಾ ಮಾಡ್ತಾ ಮಡಂತ್ಯಾರ್ ಕವಿತಾ ವಾಚನ ಮಾಡಿ ರಸಿಕರನ್ನು ರಂಜಿಸಿದರು. ಡೊ. ರುಡಾಲ್ಫ್ ಜೊಯೆರ್ ನೊರೊನ್ಹಾ ಕಿನ್ನಿಗೋಳಿ ಮತ್ತು ಲವಿ ಗಂಜಿಮಠ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ರಂಗ್ ತರಂಗ್ ತಂಡದಿಂದ ಕಲೆಗೂ ನಯಕ್ಕೂ ಕನ್ನಡಿ ಹಿಡಿಯುವಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಶೇಷ ಆಕರ್ಷಣೆಯಾಗಿ ಬ್ಲೂ ಬ್ರಾಸ್ ಬ್ಯಾಂಡ್ ಬದ್ಯಾರ್ ಅಭಿಮಾನಿಗಳನ್ನು ರಂಜಿಸಿತು.
ನೆಲ್ಸನ್ ಮೊನಿಸ್, ಮಡಂತ್ಯಾರ್ ಸ್ವಂತ ರಚಿಸಿದ ಹಾಡನ್ನು ಹಾಡಿ ಪ್ರೇಕ್ಷಕರ ಹೃದಯ ಗೆದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ರಂಗ್ ತರಂಗ್ ಮುಖ್ಯಸ್ಥ ಶ್ರೀ ವಿನಯ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ವಿನ್ಸೆಂಟ್ ಮೊರಾಸ್ ಸುಗಮವಾಗಿ ನಿರ್ವಹಿಸಿದರು.